ಒಲಿಂಪಿಕ್ಸ್: ಭಾರತದ ಹಾಕಿ ತಂಡ ಕ್ವಾರ್ಟರ್‌ ಫೈನಲ್ ಗೆ

Update: 2021-07-29 03:30 GMT
(Photo : Twitter, Hockey India)

ಟೋಕಿಯೊ: ಭಾರತದ ಪುರುಷರ ಹಾಕಿ ತಂಡ ಎ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 3-1 ಗೋಲುಗಳ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಭಾರತದ ಪರವಾಗಿ ವರುಣ್ ಕುಮಾರ್, ವಿವೇಕ್ ಸಾಗರ್ ಪ್ರಸಾದ್, ಹರ್‌ಮನ್‌ ಪ್ರೀತ್ ಸಿಂಗ್ ಗೋಲು ಗಳಿಸಿದರು. ನಾಲ್ಕನೇ ಅವಧಿವರೆಗೂ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು. ನಾಲ್ಕನೇ ಅವಧಿಯಲ್ಲಿ ವರುಣ್ ಮತ್ತು ಸಿಂಗ್ ಒಂದರ ಹಿಂದೊಂದರಂತೆ ಗೋಲು ಹೊಡೆದು ಭಾರತದ ಸುಲಭ ಜಯಕ್ಕೆ ಕಾರಣರಾದರು.

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ, ಟೋಕಿಯೊ ಒಲಿಂಪಿಕ್ಸ್‌ನ ಏಳನೇ ದಿನವಾದ ಗುರುವಾರ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಪ್ರಿಕ್ವಾರ್ಟರ್ ಪಂದ್ಯದಲ್ಲಿ ಸಿಂಧು, ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ವಿರುದ್ಧ 21-15, 21-13 ನೇರ ಸೆಟ್‌ಗಳ ಸುಲಭ ಜಯದೊಂದಿಗೆ ಮುನ್ನಡೆದರು. ಮೊದಲ ಗೇಮ್‌ನಲ್ಲಿ ಡೆನ್ಮಾರ್ಕ್ ಆಟಗಾರ್ತಿ ಉತ್ತಮ ಪ್ರತಿರೋಧ ತೋರಿದರೂ, ಸಿಂಧು ಅದ್ಭುತ ಆಟ ಪ್ರದರ್ಶಿಸಿ ಅರ್ಹ ಜಯ ಸಾಧಿಸಿದರು.

ಬಿಲ್ಗಾರಿಕೆಯಲ್ಲಿ ಚೀನಾ ತೈಪೆಯ ಯೂ ಚೆಂಗ್ ಡೆಂಗ್ ವಿರುದ್ಧ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಜಯ ಸಾಧಿಸಿದ ಭಾರತದ ಅತನು ದಾಸ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. ಅತನು ದಾಸ್ ಮುಂದಿನ ಸುತ್ತಿನಲ್ಲಿ ಕೊರಿಯಾದ ಓ ಜಿನ್ಯಾಕ್ ವಿರುದ್ಧ ಸೆಣೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News