ಒಲಿಂಪಿಕ್ಸ್ : ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್ ಫೈನಲ್ ಸುತ್ತಿಗೆ ಲಗ್ಗೆ

Update: 2021-07-31 04:36 GMT
photo: twitter

ಟೋಕಿಯೊ: ಈಗ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್‌ಪ್ರೀತ್ ಕೌರ್  ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದ ನಂತರ  ಫೈನಲ್‌ಗೆ ತಲುಪಿದರು.

25 ವರ್ಷದ ಕೌರ್, ಅರ್ಹತಾ ಸುತ್ತಿನ ಎ ವಿಭಾಗದಲ್ಲಿ ಸ್ಪರ್ಧಿಸಿದ್ದು, ತನ್ನ ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ ಡಿಸ್ಕಸ್ ಅನ್ನು 64 ಮೀಟರ್ ದೂರಕ್ಕೆ ಎಸೆದು ಫೈನಲ್ ಗೆ ತಲುಪಿದರು.

ಪಂಜಾಬ್ ನ ಕೌರ್  ಮೊದಲೆರಡು ಸುತ್ತಿನಲ್ಲಿ ಕ್ರಮವಾಗಿ 60.29 ಮೀ. ಹಾಗೂ 63.97 ಮೀ.ದೂರಕ್ಕೆ ಡಿಸ್ಕಸ್ ಎಸೆದರು.

ಫೈನಲ್  ಸುತ್ತಿಗೆ ಸ್ವಯಂ ಆಗಿ ಅರ್ಹತೆ ಪಡೆದ ಇಬ್ಬರು ಡಿಸ್ಕಸ್ ಎಸೆತಗಾರ್ತಿಯರ ಪೈಕಿ ಕೌರ್ ಕೂಡ ಒಬ್ಬರೆನಿಸಿಕೊಂಡರು. ಅಮೇರಿಕನ್ ವ್ಯಾಲರಿ ಆಲ್ಮನ್ (66.42 ಮೀ. ) ಕೂಡ ಸ್ವಯಂ ಆಗಿ ಫೈನಲ್  ತಲುಪಿದರು.

ಡಿಸ್ಕಸ್ ಎಸೆತದ ಫೈನಲ್ ಪಂದ್ಯವು ಆಗಸ್ಟ್ 2 ರಂದು ನಡೆಯಲಿದೆ.

ಅರ್ಹತಾ ಸುತ್ತಿನಲ್ಲಿ ಕೌರ್ ಅವರು  ಚಿನ್ನದ ಪದಕ ವಿಜೇತೆ ಕ್ರೊಯೇಷಿಯಾದ ಸಾಂಡ್ರಾ ಪೆರ್ಕೋವಿಕ್ (63.75 ಮೀ.) ಹಾಗೂ  ಕ್ಯೂಬಾದ ಹಾಲಿ ವಿಶ್ವ ಚಾಂಪಿಯನ್ ಯೈಮ್ ಪೆರೆಝ್ (63.18) ಅವರನ್ನು ಹಿಂದಿಕ್ಕಿ ಗಮನ ಸೆಳೆದರು. ಪೆರ್ಕೊವಿಕ್ ಮೂರನೇ ಸ್ಥಾನ ಪಡೆದರೆ, ಪೆರೆಝ್ 7ನೇ ಸ್ಥಾನ ಪಡೆದರು.

ಭಾರತದ ಹಿರಿಯ ಅಥ್ಲೀಟ್ ಸೀಮಾ ಪುನಿಯಾ ಎ ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದು ಸ್ಪರ್ಧೆಯಿಂದ ನಿರ್ಗಮಿಸಿದರು

ಆದರೆ ಫ್ಲೈವೆಯ್ಟ್ ಬಾಕ್ಸಿಂಗ್‌ನಲ್ಲಿ ವಿಶ್ವದ ನಂಬರ್ ವನ್ ಬಾಕ್ಸರ್ ಭಾರತದ ಅಮಿತ್ ಪಾಂಘಲ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾದ ಹೆರ್ನೆ ಮಾರ್ಟಿನ್ಸ್ ವಿರುದ್ಧ 1-4 ಆಘಾತಕಾರಿ ಸೋಲು ಅನುಭವಿಸಿ ಕೂಟದಿಂದ ಹೊರಬಿದ್ದರು.

ಬಿಲ್ಗಾರಿಕೆಯಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದ ಅತನು ದಾಸ್ ಕೂಡಾ ಜಪಾನ್ ಎದುರಾಳಿ ಫುರುಕವಾ ವಿರುದ್ಧ 4-6 ಸೆಟ್‌ಗಳ ಸೋಲಿನೊಂದಿಗೆ ನಿರಾಸೆ ಅನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News