ಜಮ್ಮು-ಕಾಶ್ಮೀರ: ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಪತನ

Update: 2021-08-03 07:14 GMT
ಸಾಂದರ್ಭಿಕ ಚಿತ್ರ,photo: rediff.com

ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯ ರಂಜಿತ್ ಸಾಗರ್ ಅಣೆಕಟ್ಟಿನ ಬಳಿ ಭಾರತೀಯ ಸೇನೆಯ ಹೆಲಿಕಾಪ್ಟರ್  ವೊಂದು ಪತನಗೊಂಡಿದೆ. ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ.

254 ಆರ್ಮಿ ಏವಿಯೇಷನ್ ಸ್ಕ್ವಾಡ್ರನ್‌ನ ಹೆಲಿಕಾಪ್ಟರ್ ಮಾಮುನ್ ಕ್ಯಾಂಟ್‌ನಿಂದ ಬೆಳಿಗ್ಗೆ 10:20 ಕ್ಕೆ ಹೊರಟಿತು. ಹೆಲಿಕಾಪ್ಟರ್ ರಂಜಿತ್ ಸಾಗರ್ ಅಣೆಕಟ್ಟು ಪ್ರದೇಶದಲ್ಲಿ ಕೆಳಮಟ್ಟದ ಹಾರಾಟ ನಡೆಸುತ್ತಿದ್ದಾಗ ಅದು ಅಪಘಾತಕ್ಕೀಡಾಯಿತು.

"ರಕ್ಷಣಾ  ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮುಳುಗುಗಾರರನ್ನು ಕೂಡ ಕರೆಸಿಕೊಳ್ಳಲಾಗಿದೆ. ಈ ಹೆಲಿಕಾಪ್ಟರ್ ನಲ್ಲಿ ಎಷ್ಟು ಜನರು ಇದ್ದರೆಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದು ಕಥುವಾ ಜಿಲ್ಲೆಯ ಎಸ್‌ಎಸ್‌ಪಿ ಆರ್‌.ಸಿ. ಕೊತ್ವಾಲ್ ಹೇಳಿದರು.

ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ವೊಂದು ಜಮ್ಮು ಹಾಗೂ  ಕಾಶ್ಮೀರ-ಪಂಜಾಬ್ ಗಡಿಯ ಸಮೀಪದ ಕಥುವಾ ಜಿಲ್ಲೆಯ ಲಖನ್‌ಪುರದಲ್ಲಿ ಅಪಘಾತಕ್ಕೀಡಾಗಿ ಒಬ್ಬ ಪೈಲಟ್ ಮೃತಪಟ್ಟಿದ್ದರು. ಎಚ್‌ಎಎಲ್ ಧ್ರುವ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡಿತ್ತು. ರಾಜಸ್ಥಾನದ ಸುರತ್‌ಗಢದಲ್ಲಿ ಜನವರಿಯಲ್ಲಿ ಇಳಿಯುತ್ತಿದ್ದಾಗ ಮಿಗ್ 21 ಬೈಸನ್ ವಿಮಾನ ಪತನಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News