ತೆಲಂಗಾಣ: 93 ವರ್ಷದ ವ್ಯಕ್ತಿಯ ಶವ ಫ್ರಿಡ್ಜ್ ನಲ್ಲಿಟ್ಟ ಮೊಮ್ಮಗ!

Update: 2021-08-13 05:13 GMT

ಹೈದರಾಬಾದ್: ತೆಲಂಗಾಣದಲ್ಲಿ ಯುವಕನೊಬ್ಬ ತನ್ನ ಬಳಿ ಅಂತ್ಯಕ್ರಿಯೆ ನಡೆಸಲು ಹಣವಿಲ್ಲ ಎಂಬ  ಕಾರಣಕ್ಕೆ 93 ವರ್ಷದ ತನ್ನ ಅಜ್ಜನ ಶವವನ್ನು ಫ್ರಿಡ್ಜ್ ಒಳಗೆ ಇಟ್ಟಿರುವ ಭೀಕರ ಘಟನೆ ನಡೆದಿದೆ.

ನೆರೆಹೊರೆಯವರು ದುರ್ವಾಸನೆಯ ಬಗ್ಗೆ ದೂರು ನೀಡಿದ ನಂತರ ಪೊಲೀಸರು ವಾರಂಗಲ್‌ನ ಪರ್ಕಳದಲ್ಲಿರುವ ಮನೆಯನ್ನು ಶೋಧಿಸಿದರು. ಶೋಧದ ಸಮಯದಲ್ಲಿ ಪೊಲೀಸ್ ತಂಡವು ರೆಫ್ರಿಜರೇಟರ್ ಒಳಗೆ ಕೊಳೆತ ದೇಹವನ್ನು ಪತ್ತೆ ಹಚ್ಚಿದೆ.

ನಿವೃತ್ತ ವ್ಯಕ್ತಿ ಹಾಗೂ ಅವರ ಮೊಮ್ಮಗ ನಿಖಿಲ್ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ನಿವೃತ್ತ ವ್ಯಕ್ತಿಗೆ ಬರುತ್ತಿದ್ದ ಪಿಂಚಣಿಯಿಂದ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಅಜ್ಜ ಇತ್ತೀಚೆಗೆ ಹಾಸಿಗೆ ಹಿಡಿದಿದ್ದರು ಹಾಗೂ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ನಿಖಿಲ್  ಪೊಲೀಸರಿಗೆ ತಿಳಿಸಿದ್ದಾನೆ.

 ಸಾವಿನ ನಂತರ ನಿಖಲ್  ಮೊದಲಿಗೆ ಮೃತದೇಹವನ್ನು ಬೆಡ್‌ಶೀಟ್‌ನಿಂದ ಸುತ್ತಿ ನಂತರ ಫ್ರಿಡ್ಜ್ ನಲ್ಲಿ ಇರಿಸಿದ್ದಾನೆ. 23 ವರ್ಷದ ನಿಖಿಲ್ ತನ್ನ ಅಜ್ಜ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದಾನೆ ಹಾಗೂ ಅಂತಿಮ ಸಂಸ್ಕಾರಕ್ಕೆ ಹಣವಿಲ್ಲದ ಕಾರಣ ಶವವನ್ನು ಫ್ರಿಝ್ ನಲ್ಲಿಡಲು ನಿರ್ಧರಿಸಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾನೆ.

ಪಿಂಚಣಿ ನಿಲ್ಲಬಾರದು ಎಂಬ ಉದ್ದೇಶದಿಂದ ಮೃತದೇಹವನ್ನು ಬಚ್ಚಿಟ್ಟಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News