ಮೂರನೇ ಟೆಸ್ಟ್: ಭಾರತ 78 ರನ್ ಗೆ ಆಲೌಟ್

Update: 2021-08-25 14:45 GMT

ಲೀಡ್ಸ್: ಇಂಗ್ಲೆಂಡ್ ವೇಗದ ಬೌಲರ್ ಗಳ ದಾಳಿಗೆ ತತ್ತರಿಸಿದ  ಭಾರತವು ಲೀ್ಡ್ಸ್ ನಲ್ಲಿ ಬುಧವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಮೊದಲ ಇನಿಂಗ್ಸ್ ನಲ್ಲಿ ಕೇವಲ 78 ರನ್ ಗೆ  ಆಲೌಟಾಗಿದೆ.

ಕ್ರೆಗ್ ಒವರ್ಟನ್ (3-14)ಹಾಗೂ ಸ್ಯಾಮ್ ಕರನ್ (2-27)ಪ್ರತ್ಯೇಕ ಸಂದರ್ಭದಲ್ಲಿ ಎರಡು ಎಸೆತಗಳಲ್ಲಿ  2 ವಿಕೆಟ್ ಗಳನ್ನು  ಉರುಳಿಸಿ ಭಾರತಕ್ಕೆ ಹಿನ್ನಡೆ ವುಂಟು ಮಾಡಿದರು. ಅಗ್ರ ಕ್ರಮಾಂಕದ ಆಟಗಾರರನ್ನು ಕಾಡಿದ ಹಿರಿಯ ವೇಗಿ ಆ್ಯಂಡರ್ಸನ್(3-9) 3 ವಿಕೆಟ್ ಗಳನ್ನು ಪಡೆದರು.

ರೋಹಿತ್ ಶರ್ಮಾ, ಮುಹಮ್ಮದ್ ಶಮಿ, ರವೀಂದ್ರ ಜಡೇಜ ಹಾಗೂ ಬುಮ್ರಾ ಬೇಗನೆ ಔಟಾದರು.

ರಾಹುಲ್, ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಅವರನ್ನು ಕನಿಷ್ಟ ಮೊತ್ತಕ್ಕೆ  ಕಳೆದುಕೊಂಡ ಭಾರತವು ಕಳಪೆ ಆರಂಭ ಪಡೆದಿತ್ತು. 

ರೋಹಿತ್ ಶರ್ಮಾ ಗರಿಷ್ಠ ಸ್ಕೋರ್(19)ಗಳಿಸಿದರು. ರಹಾನೆ 18 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News