ಅಫ್ಘಾನಿನ ಹಿಂದೂ, ಸಿಖ್ ನಿರಾಶ್ರಿತರಿಗೆ ಮಾತ್ರ ಆಶ್ರಯ ನೀಡಬೇಕು: ಕೇಂದ್ರ ಸರಕಾರಕ್ಕೆ ತೊಗಾಡಿಯಾ ಆಗ್ರಹ

Update: 2021-08-27 06:54 GMT

ಹೊಸದಿಲ್ಲಿ: ಅಫ್ಘಾನಿಸ್ತಾನದ ಯಾವುದೇ ಮುಸ್ಲಿಮ್ ನಾಗರಿಕರಿಗೆ ಆಶ್ರಯ ನೀಡಬಾರದು. ಆ ದೇಶದ ಹಿಂದೂ ಹಾಗೂ ಸಿಖ್ ನಿರಾಶ್ರಿತರಿಗೆ ಮಾತ್ರ ಗಡಿಗಳನ್ನು ತೆರೆದಿಡಬೇಕು ಎಂದು ಅಂತರ್ ರಾಷ್ಟ್ರೀಯ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಗುರುವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ತೊಗಾಡಿಯಾ, “ಭಾರತವು ‘ತಾಲಿಬಾನ್ ಸಿದ್ಧಾಂತದ ಕೇಂದ್ರ" ವಾಗಿರುವುದರಿಂದ ಭಾರತವು ಅತಿದೊಡ್ಡ ಬೆದರಿಕೆಯನ್ನು ಎದುರಿಸುತ್ತಿದೆ . ದೇಶದ ಭವಿಷ್ಯದ "ತಾಲಿಬಾನೀಕರಣ" ವನ್ನು ತಡೆಗಟ್ಟಲು ಮೂರು ಇಸ್ಲಾಮಿಕ್ ಸಂಘಟನೆಗಳ ಮೇಲೆ ನಿರ್ಬಂಧಗಳನ್ನು ಹೇರುವಂತೆ ಸರಕಾರವನ್ನು ಒತ್ತಾಯಿಸಿದರು.

ಅಫ್ಘಾನಿಸ್ತಾನದ ಮುಸ್ಲಿಂ ನಾಗರಿಕರಿಗೆ ಭಾರತವು ತನ್ನ ಗಡಿಗಳನ್ನು ತೆರೆದಿಡಬಾರದು.  ಅಫ್ಘಾನ್ ನ ಎಲ್ಲ ಹಿಂದೂ ಹಾಗೂ ಸಿಖ್ ರನ್ನು ಸ್ವಾಗತಿಸಬೇಕು ಎಂದು ತೊಗಾಡಿಯಾ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News