ಟೆಸ್ಟ್ ಕ್ರಿಕೆಟ್ :ಕಪಿಲ್ ದೇವ್ ದಾಖಲೆ ಮುರಿದ ವೇಗದ ಬೌಲರ್ ಬುಮ್ರಾ

Update: 2021-09-06 14:44 GMT
photo: twitter

ಲೀಡ್ಸ್: ಓವಲ್ ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ 5 ನೇ ದಿನದಾಟವಾದ ಸೋಮವಾರ ಜಸ್ ಪ್ರೀತ್ ಬುಮ್ರಾ ವೇಗವಾಗಿ 100 ಟೆಸ್ಟ್ ವಿಕೆಟ್ ಗಳನ್ನು ಪೂರೈಸಿದ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಬುಮ್ರಾ 24 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದರು, ಈ ಮೂಲಕ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್‌ ದಾಖಲೆಯನ್ನು ಮುರಿದರು. ಕಪಿಲ್  ಅವರು 25 ಟೆಸ್ಟ್‌ಗಳಲ್ಲಿ 100 ವಿಕೆಟ್ ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು. ಇರ್ಫಾನ್ ಪಠಾಣ್ (28), ಮುಹಮ್ಮದ್ ಶಮಿ (29) ಹಾಗೂ ಜಾವಗಲ್ ಶ್ರೀನಾಥ್ (30) ಪಟ್ಟಿಯಲ್ಲಿರುವ ಇತರ ಭಾರತೀಯ ವೇಗಿಗಳಾಗಿದ್ದಾರೆ.

ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ ಒಲೀ ಪೋಪ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿ ಈ ಮೈಲುಗಲ್ಲನ್ನು ಬಹಿರಂಗಪಡಿಸಿತು. ನಂತರ ಬುಮ್ರಾ ಅವರು ಜಾನಿ ಬೈರ್‌ಸ್ಟೋ ವಿಕೆಟ್ ಉರುಳಿಸಿ ಇಂಗ್ಲೆಂಡ್ ಗೆ ಡಬಲ್ ಶಾಕ್ ನೀಡಿದರು.

ಭಾರತೀಯ ಬೌಲರ್‌ಗಳಲ್ಲಿ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್ ಕೇವಲ 18 ಟೆಸ್ಟ್‌ಗಳಲ್ಲಿ 100 ಟೆಸ್ಟ್ ವಿಕೆಟ್‌ಗಳನ್ನು ತಲುಪಿದ ದಾಖಲೆಯನ್ನು ಹೊಂದಿದ್ದಾರೆ.

ಎರಪಳ್ಳಿ ಪ್ರಸನ್ನ (20), ಅನಿಲ್ ಕುಂಬ್ಳೆ (21), ಸುಭಾಷ್ ಗುಪ್ತೆ (22), ಬಿ.ಎಸ್. ಚಂದ್ರಶೇಖರ್ (22) ಮತ್ತು ಪ್ರಜ್ಞಾನ್ ಓಜಾ (22) ಈ ಪಟ್ಟಿಯಲ್ಲಿರುವ ಇತರ ಕೆಲವು ಹೆಸರುಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News