ವಾಯು ಮಾಲಿನ್ಯದ ಕಾರಣಕ್ಕೆ ಈ ವರ್ಷವೂ ದಿಲ್ಲಿಯಲ್ಲಿ ದೀಪಾವಳಿಗೆ ಪಟಾಕಿ ನಿಷೇಧ

Update: 2021-09-15 08:01 GMT

ಹೊಸದಿಲ್ಲಿ: ದೀಪಾವಳಿ ಸಮಯದಲ್ಲಿ ಅಪಾಯಕಾರಿ ವಾಯು ಮಾಲಿನ್ಯದ ಮಟ್ಟದಿಂದಾಗಿ ಆತಂಕ ಉಂಟಾದ ಕಾರಣ ದಿಲ್ಲಿ ಸರಕಾರವು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಸಂಗ್ರಹಣೆ, ಮಾರಾಟ ಹಾಗೂ ಬಳಕೆಯನ್ನು ಬುಧವಾರ ನಿಷೇಧಿಸಿದೆ.

"ಕಳೆದ ಮೂರು ವರ್ಷಗಳಲ್ಲಿ ದೀಪಾವಳಿಯ ಸಮಯದಲ್ಲಿ ದಿಲ್ಲಿಯ ಮಾಲಿನ್ಯದ ಅಪಾಯಕಾರಿ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷದಂತೆ ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಹಾಗೂ  ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತಿದೆ. ಇದರಿಂದ ಜನ ಜೀವನ ರಕ್ಷಿಸಲು ಸಾಧ್ಯ "ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ನಿಷೇಧವನ್ನು ತಡವಾಗಿ ವಿಧಿಸಲಾಯಿತು ಹಾಗೂ  ವ್ಯಾಪಾರಿಗಳಿಗೆ ನಷ್ಟಕ್ಕೆ ಕಾರಣವಾಯಿತು ಎಂದು  ಕೇಜ್ರಿವಾಲ್ ಒಪ್ಪಿಕೊಂಡರು.

ನಿಷೇಧದ ವಿಳಂಬವು ಕೆಲವು ವ್ಯಾಪಾರಿಗಳು ಪಟಾಕಿಗಳನ್ನು ದಾಸ್ತಾನು ಮಾಡಲು ಹಾಗೂ  ಮಾರಾಟ ಮಾಡಲು ಕಾರಣವಾಯಿತು ಎಂದು ಅವರು ಸೂಚಿಸಿದರು.  ಇದು ನಾಲ್ಕು ವರ್ಷಗಳಲ್ಲಿ ದಿಲ್ಲಿಯ ಕೆಟ್ಟ ಗಾಳಿಯ ಗುಣಮಟ್ಟದ ಮಟ್ಟಕ್ಕೆ (ದೀಪಾವಳಿಯ ಮರುದಿನ) ಕೊಡುಗೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News