"ಈ ರೀತಿಯ ಅವಮಾನದಿಂದ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ’’:ಸೋನಿಯಾ ಗಾಂಧಿಗೆ ತಿಳಿಸಿದ ಅಮರಿಂದರ್ ಸಿಂಗ್

Update: 2021-09-18 07:06 GMT

ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಇಂದು ಸಂಜೆ ಕಾಂಗ್ರೆಸ್ ಕರೆದಿರುವ  ಶಾಸಕರ ಸಭೆಯಲ್ಲಿ ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದು, "ಈ ರೀತಿಯ ಅವಮಾನದಿಂದ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ" ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಿಂಗ್ ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.

ಶಾಸಕರ ಸಭೆಯು ಪಂಜಾಬ್ ಕಾಂಗ್ರೆಸ್ ಸರಕಾರದಲ್ಲಿ ರಾಜ್ಯ ಚುನಾವಣೆಗೆ ತಿಂಗಳುಗಳಿರುವಾಗ ನಾಯಕತ್ವದ ಬದಲಾವಣೆಯ ಬಗ್ಗೆ ಊಹಾಪೋಹಗಳಿಗೆ ನಾಂದಿ ಹಾಡಿದೆ.

"ಈ ರೀತಿಯ ಅವಮಾನ ಸಾಕು, ಇದು ಮೂರನೇ ಬಾರಿಗೆ ಆಗುತ್ತಿದೆ. ಈ ರೀತಿಯ ಅವಮಾನದಿಂದ ನಾನು ಪಕ್ಷದಲ್ಲಿ ಉಳಿಯಲು ಸಾಧ್ಯವಿಲ್ಲ’’ ಎಂದು ಅಮರಿಂದರ್ ಸಿಂಗ್ ಅವರು ಸೋನಿಯಾ ಗಾಂಧಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮರಿಂದರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸಿದರೆ ಅವರ ಸ್ಥಾನವನ್ನು ತುಂಬಲು ಮೂವರು ನಾಯಕರ ಹೆಸರುಗಳು ಹರಿದಾಡುತ್ತಿವೆ. ಅವರುಗಳೆಂದರೆ: ಸುನೀಲ್ ಜಾಖರ್, ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಪ್ರತಾಪಸಿಂಹ ಬಜ್ವಾ ಹಾಗೂ  ಬಿಯಾಂತ್ ಸಿಂಗ್ ಅವರ ಮೊಮ್ಮಗ ಹಾಗೂ  ಸಂಸದ ರವನೀತ್ ಸಿಂಗ್ ಬಿಟ್ಟು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News