ಅಧಿಕಾರಿಗಳು 'ನಮ್ಮ ಚಪ್ಪಲಿಗಳನ್ನು ಎತ್ತಿಕೊಳ್ಳಲು ಮಾತ್ರ ಇರುವುದು': ಉಮಾ ಭಾರತಿ ವಿವಾದಾತ್ಮಕ ಹೇಳಿಕೆ ವೈರಲ್

Update: 2021-09-20 15:30 GMT

ಭೋಪಾಲ್: ಅಧಿಕಾರಶಾಹಿಯನ್ನು ದುರ್ಬಲಗೊಳಿಸುವ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ  ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ, ಅಧಿಕಾರಿಗಳು 'ನಮ್ಮ ಚಪ್ಪಲಿ ಹೆಕ್ಕಲು ಮಾತ್ರ' ಇರುವುದು ಹಾಗೂ ಅವರಿಗೆ 'ಯಾವುದೇ ನಿಲುವು (ಔಕತ್)' ಇಲ್ಲ ಎಂದು ಹೇಳಿದ್ದಾರೆ.

ಉಮಾಭಾರತಿಯ  ಹೇಳಿಕೆಯ ವೀಡಿಯೊವನ್ನು ಶನಿವಾರದಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

"ಅಧಿಕಾರಶಾಹಿಗಳು ರಾಜಕಾರಣಿಗಳನ್ನು ನಿಯಂತ್ರಿಸುತ್ತಾರೆ ಎಂದು ನೀವು ಭಾವಿಸುತ್ತೀರಾ? ಇಲ್ಲ. ಮೊದಲು ಖಾಸಗಿಯಾಗಿ ಚರ್ಚೆಗಳು ನಡೆಯುತ್ತವೆ ಹಾಗೂ  ನಂತರ ಅಧಿಕಾರಶಾಹಿ ಒಂದು ಕಡತವನ್ನು ತಯಾರಿಸಿ ಅದನ್ನು ಪಡೆಯುತ್ತದೆ. 11 ವರ್ಷಗಳ ಕಾಲ ನಾನು ಕೇಂದ್ರ ಸಚಿವೆ ಹಾಗೂ ಮುಖ್ಯಮಂತ್ರಿಯಾಗಿದ್ದೇನೆ. ಅಧಿಕಾರಶಾಹಿ,  ರಾಜಕಾರಣಿಗಳನ್ನು ನಿಯಂತ್ರಿಸುವುದು ಎಲ್ಲಾ ಅಸಂಬದ್ಧವಾಗಿದೆ. ಅವರ ನಿಲುವು ಏನು? ನಾವು ಅವರಿಗೆ ಸಂಬಳ ನೀಡುತ್ತಿದ್ದೇವೆ, ನಾವು ಅವರಿಗೆ ಪೋಸ್ಟಿಂಗ್ ನೀಡುತ್ತಿದ್ದೇವೆ, ನಾವು ಅವರಿಗೆ ಬಡ್ತಿ ನೀಡುತ್ತೇವೆ  ಹಾಗೂ ಕೆಳಗಿಳಿಸುತ್ತೇವೆ . ಅವರು ಏನು ಮಾಡಬಹುದು? ಸತ್ಯವೆಂದರೆ ನಾವು ಅವರನ್ನು ನಮ್ಮ ರಾಜಕೀಯಕ್ಕೆ ಬಳಸುತ್ತೇವೆ”ಎಂದು ಉಮಾಭಾರತಿ ಹೇಳಿದರು.

ಒಬಿಸಿ(ಇತರ ಹಿಂದುಳಿದ ವರ್ಗಗಳು)ನಿಯೋಗ ಶನಿವಾರ ಭೋಪಾಲ್ ನಲ್ಲಿ 62ರ ವಯಸ್ಸಿನ ಉಮಾ ಭಾರತಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಉಮಾಭಾರತಿಯ ಹೇಳಿಕೆಯು  ನಾಚಿಕೆಗೇಡು ಎಂದು ಟೀಕಿಸಿದ ಪ್ರತಿಪಕ್ಷ ಕಾಂಗ್ರೆಸ್ ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಕೇಳಿದೆ.

"ಅಧಿಕಾರಿಗಳು  ರಾಜಕಾರಣಿಗಳ ಚಪ್ಪಲಿಗಳನ್ನು ಎತ್ತುತ್ತಾರೆಯೇ? ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸುತ್ತಾರೆಯೇ" ಎಂದು ಕಾಂಗ್ರೆಸ್ ನಾಯಕ ಕೆ.ಕೆ .ಮಿಶ್ರಾ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News