'ನಾರ್ಕೋಟಿಕ್ಸ್ ಜಿಹಾದ್' ವಿವಾದದ ಬಗ್ಗೆ ಕೇರಳ ಸರಕಾರದ ನಿಲುವನ್ನು ಬೆಂಬಲಿಸಿದ ‌ನಟ, ರಾಜ್ಯಸಭಾ ಸಂಸದ ಸುರೇಶ್ ಗೋಪಿ

Update: 2021-09-21 14:43 GMT
Photo: Twitter/ThesureshGopi

ತಿರುವನಂತಪುರ: ಬಿಜೆಪಿ ಟಿಕೆಟ್ ಮೇಲೆ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ರಾಜ್ಯಸಭಾ ಸಂಸದ ಸುರೇಶ್ ಗೋಪಿ ಅವರು, 'ಮಾದಕವಸ್ತು ಜಿಹಾದ್' ವಿವಾದದ ಬಗ್ಗೆ ಎಲ್ ಡಿಎಫ್ ಸರಕಾರದ ನಿಲುವನ್ನು ಬೆಂಬಲಿಸುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಯೊಂದು ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿ ಹಾಗೂ  ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಪ್ರಸ್ತುತ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಅರಿತಿದ್ದಾರೆ ಎಂದು ಅವರು ಹೇಳಿದರು.

ಸುರೇಶ್ ಗೋಪಿ ಅವರ ಹೇಳಿಕೆಯು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏಕೆಂದರೆ ಬಿಜೆಪಿ 'ಮಾದಕವಸ್ತು ಜಿಹಾದ್' ವಿವಾದದ ಬಗ್ಗೆ ತನ್ನ "ನಿರಾಸಕ್ತಿಯ ನಿಲುವಿಗೆ" ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. "ರಾಜ್ಯ ಸರಕಾರವು ಈ ವಿಷಯದಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಿದೆ. ಸರಕಾರದ ನಿಲುವು ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದ್ದರೆ, ನಾನು ಅದಕ್ಕೆ ಪ್ರತಿಕ್ರಿಯಿಸುತ್ತೇನೆ. ಈಗಿನಂತೆ, ಪ್ರತಿಯೊಂದು ವಿಷಯದಲ್ಲೂ ಸರಕಾರವನ್ನು ಟೀಕಿಸುವ ಅಗತ್ಯವಿಲ್ಲ" ಎಂದು ಸುರೇಶ್ ಗೋಪಿ ಹೇಳಿದರು .

"ಈ ಪ್ರಕರಣದ ಕುರಿತು ಕ್ರಿಮಿನಲ್‌ ಕೇಸ್‌ ದಾಖಲಿಸುವ ಅವಶ್ಯಕತೆಯಿಲ್ಲ. ಅವರು ಮಾಫಿಯಾ ಪದದ ಪರ್ಯಾಯವಾಗಿ ಹೇಳಿದ್ದಾರಷ್ಟೇ. ಯಾವುದೇ ಮಾಫಿಯಾಗಳನ್ನೂ ಧರ್ಮಕ್ಕೆ ತಗಲು ಹಾಕುವುದು ತಪ್ಪು. ನಾವು ಸಾಹೋದರ್ಯತೆಯಿಂದ ಇರಬೇಕು ಎಂದು ಪಿಣರಾಯಿ ವಿಜಯನ್‌ ಹೇಳಿಕೆ ನೀಡಿದ್ದರು. ಇದು ಪರೋಕ್ಷವಾಗಿ ದ್ವೇಷಭಾಷಣ ಮಾಡಿದ ಪಾದ್ರಿಯನ್ನು ಬೆಂಬಲಿಸಿದಂತಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News