ತಮಿಳುನಾಡಿನ ಬಳಿಕ ನೀಟ್‌ ಪರೀಕ್ಷೆಗಳನ್ನು ಮರು ಪರಿಶೀಲಿಸಲು ಮುಂದಾದ ಮಹಾರಾಷ್ಟ್ರ

Update: 2021-09-23 09:20 GMT
ಸಾಂದರ್ಭಿಕ ಚಿತ್ರ

ಮುಂಬೈ: ರಾಷ್ಟ್ರೀಯ ಪ್ರವೇಶ- ಅರ್ಹತಾ ಪರೀಕ್ಷೆ ನೀಟ್‌ ಅನ್ನು ತಮಿಳುನಾಡು ರದ್ದುಗೊಳಿಸಿದ ಒಂದು ವಾರಗಳ ಬಳಿಕ ಇದೀಗ ತಮ್ಮ ರಾಜ್ಯದಲ್ಲೂ ನೀಟ್‌ ಪರೀಕ್ಷೆಯನ್ನು ಮರು ಪರಿಶೀಲಿಸುವುದಾಗಿ ಹಾಗೂ ಅದು ವಿದ್ಯಾರ್ಥಿಗಳಿಗೆ ಉತ್ತಮವೇ ಎಂದು ಪರಿಶೀಲನೆ ನಡೆಸುವುದಾಗಿ ಮಹಾರಾಷ್ಟ್ರ ಘೋಷಿಸಿದೆ. 

ANI ಯೊಂದಿಗೆ ಮಾತನಾಡಿದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಅಮಿತ್‌ ದೇಶ್‌ ಮುಖ್, "ತಮಿಳುನಾಡು ಕೈಗೊಂಡ ನಿರ್ಧಾರವು ನೀಟ್‌ ವಿದ್ಯಾರ್ಥಿಗಳಿಗೆ ಉತ್ತಮವೇ ಅಲ್ಲವೇ ಎಂದು ಚರ್ಚಿಸುವಂತೆ ಮಾಡಿದೆ. ತಮಿಳುನಾಡು ನೀಟ್‌ ಅನ್ನು ರದ್ದುಗೊಳಿಸಿರುವುದರಿಂದ ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ ಎಂದು ನಿರ್ಧರಿಸುವಂತೆ ಮಾಡಿದೆ" ಎಂದು ಅವರು ಹೇಳಿದ್ದಾರೆ.

"ನಾವು ಶೀಘ್ರದಲ್ಲೇ ಸರಕಾರದ ನಿಲುವನ್ನು ಸ್ಪಷ್ಟಪಡಿಸುತ್ತೇಬೆ. ಅವರು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಸಾಧಕ ಬಾಧಕಗಳನ್ನು ಪರಿಗಣಿಸಿದ ಬಳಿಕ ನಿರ್ಧರಿಸುತ್ತಾರೆ ಎಂದು ಸಚಿವರು ಹೇಳಿದರು.  ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಮಂಗಳವಾರ ಮಹಾರಾಷ್ಟ್ರ ಸರ್ಕಾರವು ತಮಿಳುನಾಡಿನಂತೆ ವೈದ್ಯಕೀಯ ಪ್ರವೇಶ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪ್ರವೇಶ-ಅರ್ಹತಾ ಪರೀಕ್ಷೆ (ನೀಟ್) ಯಿಂದ ವಿನಾಯಿತಿ ನೀಡಬೇಕು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News