×
Ad

ನ್ಯಾಯಾಲಯದ ನ್ಯಾಯಾಂಗ ನಿಂದನೆ ಅಧಿಕಾರ ಕಾನೂನು ಕ್ರಮದ ಮೂಲಕವೂ ಕಸಿದುಕೊಳ್ಳಲು ಅಸಾಧ್ಯ:ಸುಪ್ರೀಂಕೋರ್ಟ್

Update: 2021-09-29 14:57 IST

ಹೊಸದಿಲ್ಲಿ: ನ್ಯಾಯಾಲಯದ  ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ಅಧಿಕಾರವನ್ನು ಕಾನೂನಿನ ಕ್ರಮಗಳ ಮೂಲಕವೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಬುಧವಾರ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ನ್ಯಾಯಾಂಗ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ವಿಧಿಸಲಾಗಿರುವ 25 ಲಕ್ಷ ರೂ. ದಂಡವನ್ನು  ಸರ್ಕಾರೇತರ ಸಂಸ್ಥೆಯ ಅಧ್ಯಕ್ಷರು ಠೇವಣಿ ಇಟ್ಟಿಲ್ಲ ಆರೋಪಿಸಿದೆ. 

"ನ್ಯಾಯಾಲಯದ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರು ಸ್ಪಷ್ಟವಾಗಿ ತಪ್ಪಿತಸ್ಥರೆಂದು ನಾವು ಭಾವಿಸುತ್ತೇವೆ ಹಾಗೂ  ನ್ಯಾಯಾಲಯವನ್ನು ನಿಂದನೆ ಮಾಡುವ ಅವರ ಕ್ರಮವನ್ನು ಸಮರ್ಥಿಸಲಾಗದು" ಎಂದು ಉನ್ನತ ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಹಾಗೂ  ಎಂ.ಎಂ. ಸುಂದ್ರೇಶ್ ಅವರ ಪೀಠವು ಸೂರಜ್ ಇಂಡಿಯಾ ಟ್ರಸ್ಟ್‌ನ ಎನ್‌ಜಿಒ ಅಧ್ಯಕ್ಷ ರಾಜೀವ್ ದಯ್ಯ ಅವರು ನ್ಯಾಯಾಲಯ, ಆಡಳಿತ ಸಿಬ್ಬಂದಿ ಮತ್ತು ರಾಜ್ಯ ಸರಕಾರ ಸೇರಿದಂತೆ ಎಲ್ಲೆಡೆ 'ಕೆಸರನ್ನು ಎಸೆಯುತ್ತಿದ್ದಾರೆ' ಎಂದು ಹೇಳಿದೆ.

"ನ್ಯಾಯಾಂಗ ನಿಂದನೆಗೆ ಶಿಕ್ಷಿಸುವ ಅಧಿಕಾರವು ಈ ನ್ಯಾಯಾಲಯಕ್ಕೆ ನೀಡಲಾಗಿರುವ ಸಾಂವಿಧಾನಿಕ ಅಧಿಕಾರವಾಗಿದ್ದು, ಅದನ್ನು ಶಾಸಕಾಂಗ ಕಾಯಿದೆಯಿಂದಲೂ ಕಸಿದುಕೊಳ್ಳಲಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಸುಪ್ರೀಂಕೋರ್ಟ್ ದಯ್ಯಾಗೆ ನೋಟಿಸ್ ನೀಡಿತು ಹಾಗೂ  ಅಕ್ಟೋಬರ್ 7 ರಂದು ಶಿಕ್ಷೆಯ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತು.

ಸುಪ್ರೀಂ ಕೋರ್ಟ್ ವಿಧಿಸಿದ ವೆಚ್ಚವನ್ನು ಭರಿಸಲು ತನ್ನ ಬಳಿ ಸಂಪನ್ಮೂಲವಿಲ್ಲ ಹಾಗೂ ಕ್ಷಮಾದಾನ ಅರ್ಜಿಯೊಂದಿಗೆ ಭಾರತದ ರಾಷ್ಟ್ರಪತಿಯನ್ನು ಸಂಪರ್ಕಿಸುವುದಾಗಿ ದಯ್ಯಾ ಪೀಠಕ್ಕೆ ತಿಳಿಸಿದರು.

ಸುಪ್ರೀಂ ಕೋರ್ಟ್ 2017 ರ ತೀರ್ಪನ್ನು ಮರುಪಡೆಯಲು ಕೋರಿ ರಾಜೀವ್ ದಯ್ಯ ಸಲ್ಲಿಸಿದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಡೆಸುತ್ತಿದೆ.  64 ಪಿಐಎಲ್‌ಗಳನ್ನು ಸಲ್ಲಿಸಿದ್ದಕ್ಕಾಗಿ 25 ಲಕ್ಷ ರೂಪಾಯಿಗಳ ವೆಚ್ಚವನ್ನು ವಿಧಿಸಿದೆ ಮತ್ತು ಸುಪ್ರೀಂಕೋರ್ಟ್ ನ  ನ್ಯಾಯವ್ಯಾಪ್ತಿಯನ್ನು 'ಪದೇ ಪದೇ ದುರ್ಬಳಕೆ ಮಾಡಲಾಗುತ್ತಿದೆ' ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News