×
Ad

ಲಖಿಂಪುರ ಖೇರಿ ಹಿಂಸಾಚಾರ ಘಟನೆಗೆ ಬಿಜೆಪಿ ಭಾರೀ ಬೆಲೆ ತೆರಬೇಕಾಗುತ್ತದೆ: ಶರದ್ ಪವಾರ್

Update: 2021-10-05 19:26 IST

ಹೊಸದಿಲ್ಲಿ: ಲಖಿಂಪುರ ಖೇರಿ ಹಿಂಸಾಚಾರ ಘಟನೆಗೆ ಬಿಜೆಪಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಮಂಗಳವಾರ ಬಿಜೆಪಿಗೆ ಎಚ್ಚರಿಕೆ ನೀಡಿದರು. ಎಲ್ಲ ವಿರೋಧ ಪಕ್ಷಗಳು ರೈತರೊಂದಿಗೆ ಇವೆ ಎಂದು ಪ್ರತಿಪಾದಿಸಿದರು.

ಹಿಂಸಾಚಾರವನ್ನು 'ರೈತರ ಮೇಲಿನ ದಾಳಿ' ಎಂದು ವಿವರಿಸಿದ ಮಾಜಿ ಕೇಂದ್ರ ಕೃಷಿ ಸಚಿವ ಪವಾರ್, ಅದರ ಜವಾಬ್ದಾರಿ ಕೇಂದ್ರ ಹಾಗೂ  ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರಗಳ ಮೇಲೆ ಇದೆ ಹಾಗೂ 'ಜನರು ಅವರಿಗೆ ಸ್ಥಾನವನ್ನು ತೋರಿಸುತ್ತಾರೆ' ಎಂದು ಹೇಳಿದರು.

"ಸರಕಾರವು ಕೇಂದ್ರದಲ್ಲಿರಲಿ ಅಥವಾ ಉತ್ತರಪ್ರದೇಶದಲ್ಲೆ  ಇರಲಿ, ಅದು ಸೂಕ್ಷ್ಮತೆ ಕಳೆದುಕೊಳ್ಳಬಾರದು. ಜಲಿಯನ್ ವಾಲಾಬಾಗ್‌ನಲ್ಲಿ ಸೃಷ್ಟಿಯಾದ ಪರಿಸ್ಥಿತಿಯನ್ನು ಇದೀಗ ನಾವು ಉತ್ತರ ಪ್ರದೇಶದಲ್ಲಿ ನೋಡುತ್ತಿದ್ದೇವೆ. ಇಂದು ಅಥವಾ ನಾಳೆ ಅವರು ಅದಕ್ಕೆ ಭಾರೀ ಬೆಲೆ ಪಾವತಿಸಬೇಕಾಗುತ್ತದೆ’’ ಎಂದು ಪವಾರ್ ಅವರು ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ರೈತರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ಪವಾರ್, ಸಂಪೂರ್ಣ ವಿರೋಧ ಪಕ್ಷವು ತಮ್ಮೊಂದಿಗಿದೆ ಹಾಗೂ ಮುಂದಿನ ಕ್ರಮದ ಬಗ್ಗೆ ಶೀಘ್ರದಲ್ಲೇ ಕರೆ ನೀಡುವುದಾಗಿ ರೈತರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News