ತಮಿಳುನಾಡಿನ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಡಿಎಂಕೆ, ಮಿತ್ರಪಕ್ಷಗಳ ಮೇಲುಗೈ

Update: 2021-10-12 14:09 GMT

ಚೆನ್ನೈ: ತಮಿಳುನಾಡಿನ 9  ಜಿಲ್ಲೆಗಳಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆಯ ವೇಳೆ   ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರ ಪಕ್ಷಗಳು ಮುನ್ನಡೆ ಸಾಧಿಸಿವೆ. ಈ ಪಕ್ಷಗಳು ಇತರ 28 ಜಿಲ್ಲೆಗಳಲ್ಲಿ ಖಾಲಿ ಇರುವ 789 ಸ್ಥಾನಗಳಿಗೆ ನಡೆದಿರುವ  ಉಪಚುನಾವಣೆಯಲ್ಲೂ ಮುಂಚೂಣಿಯಲ್ಲಿವೆ.

ಮಂಗಳವಾರ ಸಂಜೆಯ ಹೊತ್ತಿಗೆ ಡಿಎಂಕೆ ಪಕ್ಷವು ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 140 ರಲ್ಲಿ 121 ಜಿಲ್ಲಾ ಪಂಚಾಯತ್ ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅದರ ಮಿತ್ರ ಪಕ್ಷ ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮತ್ತು ಬಿಜೆಪಿ ತಲಾ ಒಂದು ಜಿಲ್ಲಾ ಪಂಚಾಯತ್ ವಾರ್ಡ್‌ನಲ್ಲಿ ಮುನ್ನಡೆ ಸಾಧಿಸಿವೆ.

ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 1,381 ರಲ್ಲಿ 200 ಕ್ಕೂ ಹೆಚ್ಚು ಪಂಚಾಯತ್ ಯೂನಿಯನ್ ವಾರ್ಡ್‌ಗಳಲ್ಲಿ ಡಿಎಂಕೆ ಮುನ್ನಡೆಯಲ್ಲಿದೆ ಹಾಗೂ  ಅದರ ಮಿತ್ರ ಪಕ್ಷಗಳಾದ ಎಂಡಿಎಂಕೆ 2 ಪಂಚಾಯತ್ ಯೂನಿಯನ್ ವಾರ್ಡ್‌ಗಳಲ್ಲಿ , ಕಾಂಗ್ರೆಸ್ ಮತ್ತು ವಿಸಿಕೆ ತಲಾ ಒಂದು ಪಂಚಾಯತ್ ಯೂನಿಯನ್ ವಾರ್ಡ್‌ಗಳಲ್ಲಿ ಮುಂಚೂಣಿಯಲ್ಲಿದೆ. ಎಐಎಡಿಎಂಕೆ 16 ಪಂಚಾಯತ್ ಯೂನಿಯನ್ ವಾರ್ಡ್‌ಗಳಲ್ಲಿ, ಪಿಎಂಕೆ ಏಳು, ಎಎಂಎಂಕೆ ಎರಡರಲ್ಲಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ಐದರಲ್ಲಿ ಮುನ್ನಡೆ ಸಾಧಿಸಿದೆ.

ಪ್ರಸ್ತುತ ಟ್ರೆಂಡ್ ಮುಂದುವರಿದರೆ, ಡಿಎಂಕೆ ಹಾಗೂ  ಅದರ ಮಿತ್ರ ಪಕ್ಷಗಳು ಜಿಲ್ಲಾ ಪಂಚಾಯತ್ ವಾರ್ಡ್‌ಗಳು ಮತ್ತು ಪಂಚಾಯತ್ ಯೂನಿಯನ್ ವಾರ್ಡ್‌ಗಳಲ್ಲಿ 75 ಶೇ,. ಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತವೆ. ಡಿಎಂಕೆ ಮೈತ್ರಿಕೂಟವು 140 ಜಿಲ್ಲಾ ಪಂಚಾಯಿತಿ ವಾರ್ಡ್‌ಗಳಲ್ಲಿ 110 ಕ್ಕಿಂತ ಹೆಚ್ಚು ಹಾಗೂ  1,381 ಪಂಚಾಯತ್ ಯೂನಿಯನ್ ವಾರ್ಡ್‌ಗಳಲ್ಲಿ 1,000 ಕ್ಕಿಂತಲೂ ಹೆಚ್ಚಿನದನ್ನು ಗೆಲ್ಲಬಹುದು. ಉಪಚುನಾವಣೆ ನಡೆದಿರುವ  ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಡಿಎಂಕೆ ಮೈತ್ರಿಕೂಟ ಕೂಡ ಮುನ್ನಡೆ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News