ಅಫ್ಘಾನಿಸ್ತಾನ ಭಯೋತ್ಪಾದನೆಯ ಮೂಲವಾಗುವುದನ್ನು ತಡೆಯಿರಿ:ಅಂತರ್ ರಾಷ್ಟ್ರೀಯ ಸಮುದಾಯಕ್ಕೆ ಪ್ರಧಾನಿ ಮೋದಿ ಕರೆ

Update: 2021-10-12 15:48 GMT

ಹೊಸದಿಲ್ಲಿ: ಅಫ್ಘಾನ್ ಪ್ರದೇಶವು ತೀವ್ರವಾದಿ ಹಾಗೂ ಭಯೋತ್ಪಾದನೆಯ ಮೂಲವಾಗದಂತೆ ನೋಡಿಕೊಳ್ಳುವಂತೆ ಅಂತರ್ ರಾಷ್ಟ್ರೀಯ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದರು. ಅಫ್ಘಾನಿಸ್ತಾನ ದೇಶದಲ್ಲಿ ಬಯಸಿದ ಬದಲಾವಣೆಯನ್ನು ತರಲು ಜಾಗತಿಕ ಮಟ್ಟದಲ್ಲಿ ಒಗ್ಗಟ್ಟಿನ ಪ್ರತಿಕ್ರಿಯೆಯ ಅಗತ್ಯದ ಕುರಿತು ಒತ್ತಿ ಹೇಳಿದರು.

ಅಫ್ಘಾನಿಸ್ತಾನದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ವರ್ಚುವಲ್ ಆಗಿ  ಭಾಷಣ ಮಾಡಿದ ಮೋದಿ ಅವರು ಅಫ್ಘಾನ್ ನಾಗರಿಕರಿಗೆ "ತುರ್ತು ಹಾಗೂ ಅಡೆತಡೆಯಿಲ್ಲದ" ಮಾನವೀಯ ನೆರವು ನೀಡುವಂತೆ ಒತ್ತಾಯಿಸಿದರು ಹಾಗೂ  ಆ ದೇಶದಲ್ಲಿ ಅಂತರ್ಗತ ಆಡಳಿತದ ಅಗತ್ಯವನ್ನು ಒತ್ತಿ ಹೇಳಿದರು.

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2593 ಆಧಾರಿತ ಏಕೀಕೃತ ಅಂತರ್ ರಾಷ್ಟ್ರೀಯ ಪ್ರತಿಕ್ರಿಯೆ ಅಗತ್ಯವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News