×
Ad

ಅಪರಾಧದ ದೃಶ್ಯ ಮರುಸೃಷ್ಟಿಸಲು ಸಚಿವರ ಮಗನನ್ನು ರೈತರನ್ನು ಹತ್ಯೆಗೈದ ಸ್ಥಳಕ್ಕೆ ಕರೆದೊಯ್ದ ಪೊಲೀಸರು

Update: 2021-10-14 15:33 IST
Screengrab: Twitter/@ANINewsUP

ಲಖಿಂಪುರ ಖೇರಿ(ಉತ್ತರಪ್ರದೇಶ): ಈ ತಿಂಗಳ ಆರಂಭದಲ್ಲಿ ಲಖಿಂಪುರ ಖೇರಿಯಲ್ಲಿ ನಡೆದ ಭೀಕರ ಹಿಂಸಾ ಘಟನೆಗಳನ್ನು ಮರುಸೃಷ್ಟಿಸಲು ಉತ್ತರಪ್ರದೇಶ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.  

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಕಾರನ್ನು ಹರಿಸಿ ನಾಲ್ವರು ರೈತರನ್ನು ಹತ್ಯೆ ಗೈಯ್ಯಲಾಗಿತ್ತು.

ರೈತರ ಹತ್ಯೆಯ ಆರೋಪಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ನನ್ನು ಪೊಲೀಸರು ಆತನ ಸ್ನೇಹಿತ ಹಾಗೂ  ಸಹ ಆರೋಪಿ ಅಂಕಿತ್ ದಾಸ್ ಜೊತೆಗೆ ಘಟನಾ ಸ್ಥಳಕ್ಕೆ ಕರೆ ತಂದರು ಹಾಗೂ  ಆ ದಿನದ ಘಟನೆಗಳನ್ನು ಮರುಸೃಷ್ಟಿಸಲು ಪೊಲೀಸರ ಕಾರುಗಳನ್ನು ಬಳಸಿದರು.

ಲಖಿಂಪುರ ಘಟನೆಯನ್ನು ತನಿಖೆ ಮಾಡಲು ರಚಿಸಲಾದ ಪೊಲೀಸ್ ತಂಡದ ಸದಸ್ಯರು 12 ಗಂಟೆಗಳ ಕಾಲ  ವಿಚಾರಣೆ ನಡೆಸಿದ ನಂತರ ಆಶಿಶ್ ಮಿಶ್ರಾನನ್ನು ಕಳೆದ ವಾರ ಬಂಧಿಸಲಾಗಿತ್ತು. ಎಫ್ಐಆರ್ (ಮೊದಲ ಮಾಹಿತಿ ವರದಿ) ಯಲ್ಲಿ ಹೆಸರಿಸಲಾಗಿದ್ದರೂ ಸುಮಾರು ಏಳು ದಿನಗಳ ಕಾಲ ಹೊರಗೆ ಓಡಾಡಿಕೊಂಡಿದ್ದ ಆಶೀಶ್ ನನ್ನು  ಬಂಧಿಸಿದ ಬಳಿಕ  ಬುಧವಾರ ಆತನಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News