ಹಸಿವಿನ ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ:ಪ್ರಧಾನಿ ಮೋದಿ ವಿರುದ್ಧ ಕಪಿಲ್ ಸಿಬಲ್ ವಾಗ್ದಾಳಿ

Update: 2021-10-15 08:42 GMT

ಹೊಸದಿಲ್ಲಿ: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ದೇಶದ ಕಳಪೆ ಶ್ರೇಯಾಂಕದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಂದು ವಾಗ್ದಾಳಿ ನಡೆಸಿದರು. 2020ರಲ್ಲಿ  94 ನೇ ಸ್ಥಾನದಲ್ಲಿದ್ದ ಭಾರತವು ಇದೀಗ  101 ನೇ ಸ್ಥಾನಕ್ಕೆ ಕುಸಿದಿದ್ದು, ಪಾಕಿಸ್ತಾನ ಸೇರಿದಂತೆ ತನ್ನ ನೆರೆಹೊರೆಯ ರಾಷ್ಟ್ರಗಳಿಗಿಂತ ಹಿಂದುಳಿದಿದೆ.

ಜಾಗತಿಕ ಹಸಿವಿನ ಸೂಚ್ಯಂಕ ವರದಿಯು ಭಾರತದಲ್ಲಿ ಹಸಿವಿನ ಮಟ್ಟವನ್ನು 'ಆತಂಕಕಾರಿ' ಎಂದು ಬಣ್ಣಿಸಿದೆ.

 ಬಡತನ ಹಾಗೂ  ಹಸಿವು ನಿರ್ಮೂಲನ ಹಾಗೂ  ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವ ಸರಕಾರದ ಹಕ್ಕುಗಳನ್ನು ಲೇವಡಿ ಮಾಡಿ ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.

ಅಭಿನಂದನೆಗಳು ಮೋದಿಜೀ ಇವುಗಳನ್ನು ತೊಡೆದುಹಾಕಿದ್ದಕ್ಕೆ

  1.ಬಡತನ 2.ಹಸಿವು 3.ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವಲ್ಲಿ 4. ನಮ್ಮ ಡಿಜಿಟಲ್ ಆರ್ಥಿಕತೆ,5…ಹೀಗೆ ಹಲವು  

ಜಾಗತಿಕ ಹಸಿವು ಸೂಚ್ಯಂಕ:

2020: ಭಾರತ 94 ನೇ ಸ್ಥಾನದಲ್ಲಿದೆ

2021: ಭಾರತ 101 ನೇ ಸ್ಥಾನದಲ್ಲಿದೆ

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕಿಂತ ಭಾರತ ಹಿಂದಿದೆ ಎಂದು ಕಪಿಲ್ ಸಿಬಲ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News