ದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಎರಡನೇ ಡೋಸ್ ಲಸಿಕೆ ಪಡೆಯದವರ ಸಂಖ್ಯೆ 10.34 ಕೋಟಿಗೂ ಅಧಿಕ: ಕೇಂದ್ರ ಆರೋಗ್ಯ ಸಚಿವ

Update: 2021-10-28 09:18 GMT

ಹೊಸದಿಲ್ಲಿ:  ದೇಶದಲ್ಲಿ 10.34 ಕೋಟಿಗೂ ಅಧಿಕ ಜನರು ನಿಗದಿತ ಅವಧಿಯೊಳಗೆ ತಮ್ಮ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಅವರು ಬುಧವಾರ ಕೋವಿಡ್ ಲಸಿಕೆ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಕೋವಿಡ್ ಲಸಿಕಾ ಅಭಿಯಾನಕ್ಕೆ ಇನ್ನಷ್ಟು ವೇಗ ದೊರೆಯುವಂತೆ ಮಾಡಲು ಎಲ್ಲಾ ರಾಜ್ಯಗಳು ಕ್ರಮಕೈಗೊಳ್ಳಬೇಕೆಂದು ಸಚಿವರು ಸೂಚಿಸಿದ್ದಾರೆ.

ದೇಶದ ಒಟ್ಟು 3.92 ಕೋಟಿ ಮಂದಿ  ಆರು ವಾರಗಳ ಹಿಂದೆಯೇ ಎರಡನೇ ಡೋಸ್ ಪಡೆಯಬೇಕಿದ್ದರೂ ಪಡೆದಿಲ್ಲ ಹಾಗೂ ಸುಮಾರು 1.57 ಕೋಟಿ ಮಂದಿ ನಾಲ್ಕರಿಂದ ಎರಡನೇ ಡೋಸ್ ಪಡೆಯುವ ಅವಧಿ ದಾಟಿ ನಾಲ್ಕರಿಂದ ಆರು ವಾರಗಳಾಗಿವೆ ಎಂದು ಸಚಿವರು ಹೇಳಿದ್ದಾರೆ.

ದೇಶದ 1.5 ಕೋಟಿಗೂ ಅಧಿಕ ಜನರು ಎರಡನೇ ಡೋಸ್ ಲಸಿಕೆ ಪಡೆಯುವ ಅವಧಿ ದಾಟಿ ಎರಡರಿಂದ ನಾಲ್ಕು ವಾರಗಳಾಗಿದ್ದರೆ 3.38 ಕೋಟಿ ಜನರು ಎರಡನೇ ಡೋಸ್ ಪಡೆಯುವ ಅವಧಿ ದಾಟಿ ಎರಡು ವಾರಗಳಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

ನಿರ್ದಿಷ್ಟ ಅವಧಿಯೊಳಗೆ ಎರಡನೇ ಡೋಸ್ ಪಡೆಯಬೇಕಿರುವವರ ಪೈಕಿ ಶೇ 49ರಷ್ಟು ಮಂದಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಬಿಹಾರದವರಾಗಿದ್ದಾರೆ ಎಂದು ಸಚಿವರು ಮಾಹಿತಿ  ನೀಡಿದ್ದಾರೆ.

ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ 12ರಿಂದ 16 ವಾರಗಳೊಳಗಾಗಿ ಎರಡನೇ ಡೋಸ್ ಪಡೆಯಬೇಕಿದ್ದರೆ ಕೊವ್ಯಾಕ್ಸಿನ್ ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದ ನಾಲ್ಕರಿಂದ ಆರು ವಾರಗಳೊಳಗೆ ಪಡೆಯಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News