ಗೋವಾ: ನಟಿ ನಫೀಸಾ ಅಲಿ ಟಿಎಂಸಿಗೆ ಸೇರ್ಪಡೆ
Update: 2021-10-29 11:44 IST
ಕೋಲ್ಕತ್ತಾ: ನಟಿ ನಫೀಸಾ ಅಲಿ ಅವರು ಗೋವಾದಲ್ಲಿ ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರ್ಪಡೆಗೊಂಡಿದ್ದಾರೆ. 2022 ರ ವಿಧಾನಸಭಾ ಚುನಾವಣೆಯಲ್ಲಿ ಗೋವಾದಲ್ಲಿ ಪ್ರವೇಶ ಮಾಡಲು ಟಿಎಂಸಿ ಪ್ರಯತ್ನಿಸುತ್ತಿದೆ.
ಮಮತಾ ಬ್ಯಾನರ್ಜಿ ಅವರು ಗುರುವಾರ ಸಂಜೆ ಗೋವಾಕ್ಕೆ ಭೇಟಿ ನೀಡಿದ್ದಾರೆ. ಇದು ಚುನಾವಣಾ ಪೂರ್ವದಲ್ಲಿ ಬಿಜೆಪಿ ಆಡಳಿತದ ರಾಜ್ಯದಲ್ಲಿನ ರಾಜಕೀಯ ಮನಸ್ಥಿತಿಯನ್ನು ಅಳೆಯುವ ಅವರ ಪ್ರಯತ್ನವೆಂದು ಪರಿಗಣಿಸಲಾಗಿದೆ.
ಕರಾವಳಿ ರಾಜ್ಯಕ್ಕೆ ಮೂರು ದಿನಗಳ ಪ್ರವಾಸದಲ್ಲಿರುವ ಬ್ಯಾನರ್ಜಿ ಅವರು ಸಂಜೆ 5.30 ರ ಸುಮಾರಿಗೆ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಅವರನ್ನು ಟಿಎಂಸಿ ಸಂಸದ ಡೆರೆಕ್ ಒ'ಬ್ರೇನ್ ಹಾಗೂ ಸ್ಥಳೀಯ ನಾಯಕರು ಬರಮಾಡಿಕೊಂಡರು.