ಇಲೆಕ್ಟ್ರಿಕ್ ವಾಹನಗಳು ಜನಸ್ನೇಹಿಯಾಗಿರಲಿ

Update: 2021-10-29 17:56 GMT

ಮಾನ್ಯರೇ,

ಪೆಟ್ರೋಲಿಯಂ ಇಂಧನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಇತ್ತೀಚಿನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಾಗುತ್ತಿದೆ. ಪೆಟ್ರೋಲ್‌ಗೆ ಹೋಲಿಸಿದರೆ ಇದು ಮಿತವ್ಯಯವೆಂದು ಹೇಳಲಾಗುತ್ತಿದೆ. ಅಲ್ಲದೆ ಇಂತಹ ವಾಹನಗಳಿಂದ ವಾಯುಮಾಲಿನ್ಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಆದರೆ ಇಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಲು ತೆಗೆದುಕೊಳ್ಳುವ ಸಮಯ ದೀರ್ಘವಾಗಿದೆ ಮತ್ತು ಇಂತಹ ವಾಹನವು ಚಲಿಸುವ ದೂರಕ್ಕೆ ಒಂದಿಷ್ಟು ಮಿತಿಯಿದೆ. ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಸಬ್ಸಿಡಿಗಳಿವೆ, ಆದರೆ ಭವಿಷ್ಯದಲ್ಲಿ ತೆರಿಗೆಗಳನ್ನು ಹೆಚ್ಚಿಸಿದರೆ ಇಂತಹ ವಾಹನಗಳೂ ಗ್ರಾಹಕನಿಗೆ ಹೊರೆಯಾಗುವುದು ಖಂಡಿತ. ಹೈಡ್ರೋಜನ್ ಮತ್ತು ಇಲೆಕ್ಟ್ರಿಕ್ ವಾಹನಗಳು ಮಾಲಿನ್ಯವನ್ನು ಕಡಿಮೆ ಮಾಡುವುದೇನೋ ಸರಿ, ಆದರೆ ಅಂತಹ ವಾಹನಗಳ ಬೆಲೆ, ಅದರ ನಿರ್ವಹಣೆಯ ವೆಚ್ಚವನ್ನು ಜನಸ್ನೇಹಿಯಾಗಿಸಿದರೆ ಮುಂದೆ ಈ ವಾಹನಗಳು ಜನಪ್ರಿಯವಾಗಿ ಭವಿಷ್ಯದಲ್ಲಿ ಪೆಟ್ರೋಲಿಯಂ ಇಂಧನದ ಬಳಕೆ ಕಡಿಮೆಯಾಗಿ ದೇಶಕ್ಕೂ ಉಳಿತಾಯವಾದೀತು.
 

Writer - -ಶಹಾಲ ಬೆಂದೂರು, ಮಂಗಳೂರು

contributor

Editor - -ಶಹಾಲ ಬೆಂದೂರು, ಮಂಗಳೂರು

contributor

Similar News