ಫ್ರೆಂಚ್ ಓಪನ್: ಸೆಮಿಫೈನಲ್‌ನಲ್ಲಿ ಸಿಂಧುಗೆ ಸೋಲು

Update: 2021-10-30 18:26 GMT

ಪ್ಯಾರಿಸ್, ಅ. 30: ಅವಳಿ ಒಲಿಂಪಿಕ್ ಪದಕಗಳ ವಿಜೇತೆ ಭಾರತದ ಪಿ.ವಿ. ಸಿಂಧು ಶನಿವಾರ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಪಂದ್ಯದಲ್ಲಿ ಅವರನ್ನು ಜಪಾನ್‌ನ ಸಯಕ ಟಕಹಶಿ 18-21, 21-16, 21-12 ಗೇಮ್‌ಗಳಿಂದ ಸೋಲಿಸಿದರು.

ಏಳನೇ ವಿಶ್ವ ರ್ಯಾಂಕಿಂಗ್‌ನ ಸಿಂಧು ಮತ್ತು 15ನೇ ವಿಶ್ವ ರ್ಯಾಂಕಿಂಗ್‌ನ ಟಕಹಶಿ ಈಗಾಗಲೇ ಎಂಟು ಬಾರಿ ಮುಖಾಮುಖಿಯಾಗಿದ್ದು, ಇದು ಸಿಂಧು ಅವರ ನಾಲ್ಕನೇ ಸೋಲಾಗಿದೆ. ಇದಕ್ಕೂ ಮೊದಲು, ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅವರು ಥಾಯ್ಲೆಂಡ್‌ನ ಬುಸನನ್ ಒಂಗ್‌ಬಮ್ರುಂಗ್‌ಫನ್‌ರನ್ನು 21-14, 21-14 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಸಿಂಧು ಎಂಟನೇ ಶ್ರೇಯಾಂಕದ ತನ್ನ ಎದುರಾಳಿಯನ್ನು 38 ನಿಮಿಷಗಳಲ್ಲಿ ಸೋಲಿಸಿದರು. ಇದರೊಂದಿಗೆ ಸಿಂಧೂ ಮತ್ತು ಬುಸನನ್ ಒಂಗ್‌ಬಮ್ರುಂಗ್‌ಫನ್ ನಡುವಿನ ಈವರೆಗಿನ ಮುಖಾಮುಖಯಲ್ಲಿ ಸಿಂಧು 14 ಪಂದ್ಯಗಳನ್ನು ಗೆದ್ದಿದ್ದಾರೆ ಹಾಗೂ ಒಮ್ಮೆ ಸೋತಿದ್ದಾರೆ.

ಕಳೆದ ವಾರ ಡೆನ್ಮಾರ್ಕ್ ಓಪನ್‌ನಲ್ಲೂ ಸಿಂಧು ಬುಸನನ್‌ರನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News