×
Ad

ದೀಪಾವಳಿಯ ವೇಳೆ ಬಿರಿಯಾನಿ ವ್ಯಾಪಾರಿಗೆ ಬೆದರಿಕೆ: ಪ್ರಕರಣ ದಾಖಲಿಸಿದ ಪೊಲೀಸರು

Update: 2021-11-06 16:59 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೀಪಾವಳಿಯ ಸಂದರ್ಭದಲ್ಲಿ ತನ್ನ ಅಂಗಡಿಯಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿ ಹಾಗೂ ಸಹಾಯಕನಿಗೆ ಹಿಂದುತ್ವ ಸಂಘಟನೆಗಳು ಬೆದರಿಕೆ ಹಾಕಿ ಅಂಗಡಿ ಮುಚ್ಚುವಂತೆ ಮಾಡಿದ್ದ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ವೀಡಿಯೋದಲ್ಲಿ ಆರೋಪಿಯು ತನ್ನನ್ನು ನರೇಶ್‌ ಕುಮಾರ್‌ ಸೂರ್ಯವಂಶಿ ಎಂದು ಪರಿಚಯಿಸಿಕೊಂಡಿದ್ದು, ಆತ ಹಿಂದುತ್ವ ಗುಂಪು ಬಜರಂಗದಳದ ಕಾರ್ಯಕರ್ತನಾಗಿದ್ದಾನೆ ಎಂದು ವರದಿ ತಿಳಿಸಿದೆ. ಹಿಂದೂಗಳಿರುವ ಪ್ರದೇಶದಲ್ಲಿ ಇನ್ನುಮುಂದೆ ಯಾವುದೇ ಹಬ್ಬಗಳಿಗೂ ಅಂಗಡಿ ತೆರೆಯಬಾರದು ಎಂದು ಆತ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗುರುವಾರ ರಾತ್ರಿ ೯ ಗಂಟೆಯ ಆಸುಪಾಸಿನಲ್ಲಿ ಘಟನೆ ನಡೆದಿದ್ದು, ಬೆದರಿಕೆ ಹಾಕಿದ ತಕ್ಷಣವೇ ಅಂಗಡಿ ಮಾಲಕ ಹಾಗೂ ಸಹಾಯಕ ಅಂಗಡಿ ಮುಚ್ಚಿ ತೆರಳಿದ್ದಾರೆ. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News