×
Ad

ಎಲ್. ಕೆ.ಅಡ್ವಾಣಿ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

Update: 2021-11-08 12:13 IST
photo:ANI

ಹೊಸದಿಲ್ಲಿ: ಇಂದು 94 ನೇ ವರ್ಷಕ್ಕೆ ಕಾಲಿಟ್ಟ  ಮಾಜಿ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ  ನರೇಂದ್ರ ಮೋದಿ ಅವರು ಅಡ್ವಾಣಿಯವರನ್ನು ಖುದ್ದಾಗಿ ಅಭಿನಂದಿಸಿದರು.

"ವಿದ್ವತ್ ಅನ್ವೇಷಣೆ ಹಾಗೂ  ಶ್ರೀಮಂತ ಬುದ್ಧಿಶಕ್ತಿ"ಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಅಡ್ವಾಣಿಯವರನ್ನು ಶ್ಲಾಘಿಸಿದ್ದಾರೆ ಜನರನ್ನು ಸಬಲೀಕರಣಗೊಳಿಸುವ ಹಾಗೂ 'ನಮ್ಮ ಸಾಂಸ್ಕೃತಿಕ ಹೆಮ್ಮೆ' ಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಮಾಡಿದ ಪ್ರಯತ್ನಗಳಿಗಾಗಿ ಹಿರಿಯ ಬಿಜೆಪಿ ನಾಯಕರಿಗೆ ಮನ್ನಣೆ ನೀಡಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿರುವ ಚಿತ್ರಗಳಲ್ಲಿ ಪ್ರಧಾನಿ ಮೋದಿ ಅವರು ಹಿರಿಯ ನಾಯಕರೊಂದಿಗೆ ಉದ್ಯಾನದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.

 ಎಲ್‌ಕೆ ಅಡ್ವಾಣಿ ಅವರು ಬಿಜೆಪಿ ಕಾರ್ಯಕರ್ತರು ಮತ್ತು ದೇಶವಾಸಿಗಳಿಗೆ "ಜೀವಂತ ಸ್ಫೂರ್ತಿ" ಎಂದು ಕಳೆದ ವರ್ಷ ತಮ್ಮ ಜನ್ಮದಿನದ ಶುಭಾಶಯಗಳಲ್ಲಿ ಪ್ರಧಾನಿ ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News