ಅಗತ್ಯ ವಸ್ತುಗಳ ಬೆಲೆ ಇಳಿಯಲಿ

Update: 2021-11-08 18:14 GMT

ಮಾನ್ಯರೇ,

ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶದ ಪರಿಣಾಮವೋ ಅಥವಾ ವಿರೋಧ ಪಕ್ಷಗಳ ಒತ್ತಡವೋ, ಒಟ್ಟಿನಲ್ಲಿ ತೈಲ ಬೆಲೆಯಲ್ಲಿ ಒಂದಿಷ್ಟು ಇಳಿಸಿರುವುದು ನಿಜಕ್ಕೂ ಸ್ವಾಗತಾರ್ಹ ಕ್ರಮ. ನಿರಂತರ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಸರಕು ಸಾಗಣೆ ವೆಚ್ಚ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗಿ ಬಡ ಮತ್ತು ಮಧ್ಯಮ ವರ್ಗದವರ ಬದುಕು ಸಂಕಷ್ಟದಲ್ಲಿದೆ. ಸರಕಾರಗಳೇನೋ ತೈಲಗಳ ಮೇಲಿನ ಸುಂಕವನ್ನು ಕಡಿತಗೊಳಿಸಿ ಅದರ ಒಂದಿಷ್ಟು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ, ಆದರೆ ತೈಲ ಬೆಲೆ ಏರಿಕೆಯ ನೆಪವನ್ನಿಟ್ಟುಕೊಂಡು ದುಬಾರಿಯಾಗಿದ್ದ ಸರಕು ಸಾಗಣೆ ವೆಚ್ಚ, ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳು, ದಿನಸಿ ಪದಾರ್ಥಗಳು, ಸಿಲಿಂಡರ್, ಕಟ್ಟಡ ಸಾಮಗ್ರಿಗಳು, ಟ್ಯಾಕ್ಸಿ ಬಾಡಿಗೆ, ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಇಳಿಕೆಗೆ ಶೀಘ್ರವೇ ಕ್ರಮ ಕೈಗೊಳ್ಳುವ ಮೂಲಕ ಜನರ ಮೇಲಿನ ಹೊರೆಯನ್ನು ಇನ್ನಷ್ಟು ತಗ್ಗಿಸಬೇಕಾಗಿದೆ.

Writer - ಮುರುಗೇಶ ಡಿ., ದಾವಣಗೆರೆ

contributor

Editor - ಮುರುಗೇಶ ಡಿ., ದಾವಣಗೆರೆ

contributor

Similar News