ಚೀನಾ ಅತಿ ದೊಡ್ಡ ಭದ್ರತಾ ಬೆದರಿಕೆ:ರಕ್ಷಣಾ ಮುಖ್ಯಸ್ಥ ಜನರಲ್ ರಾವತ್
Update: 2021-11-12 17:49 IST
ಬೀಜಿಂಗ್: ಚೀನಾವು ಭಾರತದ ಅತಿದೊಡ್ಡ ಭದ್ರತಾ ಬೆದರಿಕೆಯಾಗಿ ಮಾರ್ಪಟ್ಟಿದೆ ಹಾಗೂ ಕಳೆದ ವರ್ಷ ನೈಜ ಹಿಮಾಲಯದ ಗಡಿಯನ್ನು ಸುರಕ್ಷಿತವಾಗಿರಿಸಲು ದಿಲ್ಲಿಯಿಂದ ಧಾವಿಸಿದ ಹತ್ತಾರು ಸೈನಿಕರು ಹಾಗೂ ಶಸ್ತ್ರಾಸ್ತ್ರಗಳು ದೀರ್ಘಕಾಲದವರೆಗೆ ನೆಲೆಗೆ ಮರಳಲು ಸಾಧ್ಯವಾಗದು ಎಂದು ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಪರಮಾಣು ಅಸ್ತ್ರ ಹೊಂದಿರುವ ನೆರೆಹೊರೆಯ ರಾಷ್ಟ್ರಗಳ ನಡುವಿನ ಗಡಿ ವಿವಾದವನ್ನು ಪರಿಹರಿಸುವಲ್ಲಿ 'ನಂಬಿಕೆಯ' ಕೊರತೆ ಹಾಗೂ 'ಸಂಶಯ' ಹೆಚ್ಚಾಗುತ್ತಿದೆ ಎಂದು ಜನರಲ್ ರಾವತ್ ಗುರುವಾರ ತಡರಾತ್ರಿ ಹೇಳಿದರು.
ಕಳೆದ ತಿಂಗಳು ಭಾರತ ಮತ್ತು ಚೀನಾದ ಮಿಲಿಟರಿ ಕಮಾಂಡರ್‌ಗಳ ನಡುವಿನ 13'ನೇ ಸುತ್ತಿನ ಗಡಿ ಮಾತುಕತೆಯು ಒಂದು ಬಿಕ್ಕಟ್ಟಿನಲ್ಲಿ ಕೊನೆಗೊಂಡಿತು. ಏಕೆಂದರೆ ಎರಡೂ ಕಡೆಯವರು ಗಡಿಯಿಂದ ಹಿಂದೆ ಸರಿಯುವುದು ಹೇಗೆ ಎಂದು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.