ಉದ್ಯಮ ಸಮೂಹದ ಮೇಲೆ ದಾಳಿ ನಡೆಸಿ 200 ಕೋ.ರೂ.ಗೂ ಅಧಿಕ ಕಪ್ಪು ಹಣ ಪತ್ತೆ ಹಚ್ಚಿದ ಐಟಿ

Update: 2021-11-16 17:30 GMT

ಪುಣೆ: ಅಗೆಯುವ ಯಂತ್ರಗಳು ಹಾಗೂ ಕ್ರೇನ್‌ಗಳಂತಹ ಭಾರೀ ಯಂತ್ರೋಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಪುಣೆ ಮೂಲದ ಉದ್ಯಮ ಸಮೂಹದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು  200 ಕೋಟಿ ರೂ. ಗೂ ಹೆಚ್ಚು ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಂಗಳವಾರ ತಿಳಿಸಿದೆ.

ನವೆಂಬರ್ 11 ರಂದು ಏಳು ನಗರಗಳ 25 ಸ್ಥಳಗಳಲ್ಲಿ ಶೋಧ ನಡೆಸಲಾಯಿತು.

ಲೆಕ್ಕಕ್ಕೆ ಸಿಗದ  1 ಕೋಟಿ ಮೌಲ್ಯದ ನಗದು ಹಾಗೂ  ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಶೋಧ ಕಾರ್ಯ ಕೈಗೊಳ್ಳಲಾಗಿದ್ದು, ಮೂರು ಬ್ಯಾಂಕ್ ಲಾಕರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

‘ಶೋಧನಾ ಕ್ರಮವು ಒಟ್ಟು  200 ಕೋಟಿ ರೂ.ಗೂ ಮೀರಿದ ಲೆಕ್ಕಕ್ಕೆ ಸಿಗದ ಆದಾಯವನ್ನು ಪತ್ತೆಹಚ್ಚಲು ಕಾರಣವಾಗಿದೆ’ ಎಂದು ಸಿಬಿಡಿಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಿಬಿಡಿಟಿ ತೆರಿಗೆ ಇಲಾಖೆಗೆ ನೀತಿ ರೂಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News