ಜಮ್ಮು-ಕಾಶ್ಮೀರ:ಇಬ್ಬರು ಉದ್ಯಮಿಗಳ ಮೃತದೇಹ ದಫನ ಸ್ಥಳದಿಂದ ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ

Update: 2021-11-18 17:43 GMT
ಮುಹಮ್ಮದ್ ಅಲ್ತಾಫ್ ಭಟ್ ಹಾಗೂ ಮುದಾಸಿರ್ ಗುಲ್ photo:twitter/ndtv

ಶ್ರೀನಗರ: ಭಾರೀ ಪ್ರತಿಭಟನೆ ಹಾಗೂ ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳ ಬಳಿಕ ಜಮ್ಮು ಹಾಗೂ  ಕಾಶ್ಮೀರದ ಶ್ರೀನಗರದಲ್ಲಿ ನಡೆದ ವಿವಾದಾತ್ಮಕ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ ಇಬ್ಬರು ಉದ್ಯಮಿಗಳ ಶವಗಳನ್ನು ಇಂದು ಸಂಜೆ ದಫನ ಸ್ಥಳದಿಂದ ಹೊರತೆಗೆಯಲಾಯಿತು ಎಂದು NDTV ವರದಿ ಮಾಡಿದೆ.

ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಹಾಗೂ  ರಾತ್ರಿ ವೇಳೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಹಮ್ಮದ್ ಅಲ್ತಾಫ್ ಭಟ್ ಹಾಗೂ ಡೆಂಟಲ್ ಸರ್ಜನ್ ಮುದಾಸಿರ್ ಗುಲ್ ಅವರು ಸೋಮವಾರ ಶ್ರೀನಗರದ ಹೈದರ್‌ಪೋರಾದ ವಾಣಿಜ್ಯ ಸಂಕೀರ್ಣದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ನಾಲ್ವರಲ್ಲಿ ಸೇರಿದ್ದಾರೆ.

ಭದ್ರತಾ ಪಡೆಗಳಿಂದ ಈ ಇಬ್ಬರು  ಕೊಲ್ಲಲ್ಪಟ್ಟರು ಎಂದು ಕುಟುಂಬಗಳು ಆರೋಪಿಸಿದ್ದು ಪೊಲೀಸರು ಅವರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ನಿರಾಕರಿಸಿದ್ದರು.

ಈ ಬಗ್ಗೆ ಪ್ರತಿಭಟನೆಗಳು ಶೀಘ್ರದಲ್ಲೇ ರಾಜ್ಯವನ್ನು ಆವರಿಸಿದವು, ರಾಜಕೀಯ ನಾಯಕರು ಆಡಳಿತವನ್ನು ದೂಷಿಸಿದರು.

"ಕಾಶ್ಮೀರವನ್ನು ಯಾವ ಮಟ್ಟಕ್ಕೆ ಇಳಿಸಲಾಗಿದೆ ನೋಡಿ. ತಮ್ಮ ಮುಗ್ಧತೆಯನ್ನು ಸ್ಥಾಪಿಸುವ ಜವಾಬ್ದಾರಿ ಜನರ ಮೇಲಿದೆ... ನ್ಯಾಯವು ಈ ರೀತಿ ಕೆಲಸ ಮಾಡುವುದಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ.

ಇಬ್ಬರು ನಾಗರಿಕರನ್ನು ಭಯೋತ್ಪಾದಕರು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಮೊದಲು ಹೇಳಿದ್ದರು, ಆದರೆ ನಂತರ ಅವರು ಕ್ರಾಸ್ ಫೈರ್‌ನಲ್ಲಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದರು. ಆರಂಭದಲ್ಲಿ, ವಾಣಿಜ್ಯ ಸಂಕೀರ್ಣದ ಮಾಲೀಕ ಅಲ್ತಾಫ್ ಭಟ್ ಅವರನ್ನು "ಭಯೋತ್ಪಾದಕರ ಆಶ್ರಯದಾತ" ಎಂದು ಪರಿಗಣಿಸಲಾಗುವುದು ಎಂದು ಪೊಲೀಸರು ಹೇಳಿದ್ದರು, ಆದರೆ ನಂತರ ತಮ್ಮ ನಿಲುವನ್ನು ಬದಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News