×
Ad

ಕೋವಿಡ್ ಲಸಿಕೆ: ಜಾಗತಿಕ ಸರಾಸರಿಗಿಂತ ಭಾರತ ಹಿಂದೆ

Update: 2021-11-19 23:01 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ.19: ಕೋವಿಡ್-19 ಸೋಂಕಿನ ವಿರುದ್ಧದ ಲಸಿಕೆ ನೀಡಿಕೆಯಲ್ಲಿ 100 ಕೋಟಿ ಡೋಸ್ ದಾಟಿದ್ದನ್ನು ಭಾರತ ದೊಡ್ಡ ಸಾಧನೆಯೆಂದು ಬಿಂಬಿಸಿಕೊಂಡಿರುವ ಬೆನ್ನಲ್ಲೇ 5 ಕೋಟಿಗಿಂತ ಅಧಿಕ ಜನ ಸಂಖ್ಯೆ ಇರುವ 29 ದೇಶಗಳ ಸರಾಸರಿಗೆ ಹೋಲಿಸಿದರೆ ಭಾರತದಲ್ಲಿ ಲಸಿಕೆ ನೀಡಲಾದ ಪ್ರಮಾಣ ಜಾಗತಿಕ ಸರಾಸರಿಗಿಂತ ಕಡಿಮೆ ಎಂಬ ಅಂಶ ಬಹಿರಂಗವಾಗಿದೆ.

ಪ್ರತಿ 100 ಮಂದಿಗೆ ನೀಡಲಾದ ಡೋಸ್ ಸಂಖ್ಯೆ ಮತ್ತು ಸಂಪೂರ್ಣ ಲಸಿಕೆ ಡೋಸ್‌ಗಳನ್ನು ಪಡೆದ ಜನಸಂಖ್ಯೆಯ ಶೇಕಡಾವಾರು ಪ್ರಮಾಣ ಎರಡೂ ಮಾನದಂಡಗಳಲ್ಲಿ ಭಾರತ ಜಾಗತಿಕ ಸರಾಸರಿಗಿಂತ ಹಿಂದಿದೆ ಎಂದು The Times of India ವರದಿ ಮಾಡಿದೆ

ನ.16ರವರೆಗೆ ಜಾಗತಿಕ ಮಟ್ಟದಲ್ಲಿ ಪ್ರತೀ 100 ಮಂದಿಗೆ 96 ಡೋಸ್ ಲಸಿಕೆ ನೀಡಿಕೆಯಾಗಿದ್ದರೆ ಭಾರತದಲ್ಲಿ ಈ ಪ್ರಮಾಣ 100ಕ್ಕೆ 81 ಮಾತ್ರ ಇದೆ. ಅಂತೆಯೇ ವಿಶ್ವದಲ್ಲಿ ಶೇ.41ರಷ್ಟು ಮಂದಿಗೆ ಎರಡೂ ಡೋಸ್‌ಗಳು ಪೂರ್ಣವಾಗಿದ್ದರೆ ಭಾರತದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರ ಪ್ರಮಾಣ ಶೇ.27ರಷ್ಟು ಮಾತ್ರ.

ಅತ್ಯಧಿಕ ಜನಸಂಖ್ಯೆಯ 29 ದೇಶಗಳ ಪೈಕಿ ಪ್ರತೀ 100 ಮಂದಿಗೆ ನೀಡಲಾದ ಡೋಸ್‌ಗಳ ಸಂಖ್ಯೆಯಲ್ಲಿ ಭಾರತ 16ನೇ ಸ್ಥಾನದಲ್ಲಿದೆ. ಸಂಪೂರ್ಣ ಲಸಿಕೆ ಸುರಕ್ಷೆ ಪಡೆದ ಜನರ ಮಾನದಂಡದಲ್ಲಿ ಭಾರತ 19ನೇ ಸ್ಥಾನದಲ್ಲಿದೆ. ವಿಶ್ವದಲ್ಲೇ ಅತ್ಯಧಿಕ ಲಸಿಕಾ ಡೋಸ್ ಉತ್ಪಾದಿಸುವ ದೇಶವಾಗಿದ್ದೂ ಭಾರತ, ಲಸಿಕೆ ನೀಡಿಕೆಯಲ್ಲಿ ಹಿಂದಿದೆ. ಕಳೆದ ಸೆಪ್ಟಂಬರ್‌ನಲ್ಲಿ ಭಾರತಕ್ಕಿಂತ ಹಿಂದಿದ್ದ ಇರಾನ್ ಹಾಗೂ ವಿಯೆಟ್ನಾಂ ಇದೀಗ ಭಾರತವನ್ನು ಹಿಂದಿಕ್ಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News