ಸಿಖ್ಖರ ಬಗ್ಗೆ ವಿವಾದಾತ್ಮಕ ಹೇಳಿಕೆಗಾಗಿ ದಿಲ್ಲಿ ಅಸೆಂಬ್ಲಿ ಸಮಿತಿಯಿಂದ ಕಂಗನಾ ರಣಾವತ್‌ಗೆ ಸಮನ್ಸ್

Update: 2021-11-25 07:04 GMT

ಹೊಸದಿಲ್ಲಿ: ಸಿಖ್ಖರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಅವರಿಗೆ ದಿಲ್ಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿಯು  ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 6 ರಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ನೇತೃತ್ವದ ಸಮಿತಿಯ ಮುಂದೆ ಹಾಜರಾಗುವಂತೆ ರಣಾವತ್  ಅವರಿಗೆ ತಿಳಿಸಲಾಗಿದೆ.

"ಸಿಖ್ಖರ ಬಗ್ಗೆ ಅವಹೇಳನಕಾರಿ ಹೇಳಿಕೆ" ಗಾಗಿ ರಣಾವತ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಕ್ಕಾಗಿ ಮುಂಬೈನಲ್ಲಿ ಸಿಖ್ಖರು ದಾಖಲಿಸಿದ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ಅನ್ನು ನಟಿ ಎದುರಿಸುತ್ತಾರೆ.

ಮುಂಬೈ ಉದ್ಯಮಿ, ದಿಲ್ಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ನಾಯಕರು ಹಾಗೂ  ಶಿರೋಮಣಿ ಅಕಾಲಿ ದಳ ಸಲ್ಲಿಸಿದ ಪೊಲೀಸ್ ದೂರಿನಲ್ಲಿ ರಣಾವತ್ ಅವರು 'ಉದ್ದೇಶಪೂರ್ವಕವಾಗಿ' ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ವರ್ಷಪೂರ್ತಿ ಪ್ರತಿಭಟನೆಯನ್ನು 'ಖಾಲಿಸ್ತಾನಿ' ಚಳುವಳಿ ಎಂದು ಬಿಂಬಿಸಿದ್ದಾರೆ ಹಾಗೂ  ರೈತರನ್ನು  'ಖಾಲಿಸ್ತಾನಿ ಭಯೋತ್ಪಾದಕರು" ಎಂದು ಕರದಿದ್ದಾರೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News