ಸಿವಿಸಿ, ಈಡಿ ವಿರುದ್ಧ ದಿಲ್ಲಿ ಹೈಕೋರ್ಟ್‌ಗೆ ಮೊರೆ ಹೋದ ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ
ಹೊಸದಿಲ್ಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ವೆಬ್‌ಸೈಟ್‌ನಲ್ಲಿ ಈಡಿ ಮುಖ್ಯಸ್ಥ ಎಸ್.ಕೆ. ಮಿಶ್ರಾ ಅವರ ಸ್ಥಿರಾಸ್ತಿ ಘೋಷಣೆಗಳನ್ನು ಅಪ್‌ಲೋಡ್ ಮಾಡಿ ಸಾರ್ವಜನಿಕಗೊಳಿಸದ ಕೇಂದ್ರ ಜಾಗೃತ ಆಯೋಗ ಹಾಗೂ ಜಾರಿ ನಿರ್ದೇಶನಾಲಯದ ವಿರುದ್ಧ ಸಾಮಾಜಿಕ ಹೋರಾಟಗಾರ ಕಾರ್ಯಕರ್ತ ಸಾಕೇತ್ ಗೋಖಲೆ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆಂದು LiveLaw.in ವರದಿ ಮಾಡಿದೆ.
ಸಿವಿಸಿ ಕಳೆದ ವರ್ಷ ನವೆಂಬರ್ 23 ರಂದು ಕಚೇರಿ ಆದೇಶವನ್ನು ಹೊರಡಿಸಿದ್ದು, ಎಲ್ಲಾ ಸರಕಾರಿ ಉದ್ಯೋಗಿಗಳಿಗೆ 2019 ರವರೆಗಿನ ವಾರ್ಷಿಕ ಸ್ಥಿರ/ಚರ ಆಸ್ತಿ ರಿಟರ್ನ್ಸ್ ಸಲ್ಲಿಸಲು ಒಂದು ವಾರದ ಸಮಯವನ್ನು ನೀಡಿದೆ.
ಆದಾಗ್ಯೂ, ಮಿಶ್ರಾ ಅವರ ಹಿಂದಿನ ಮೂರು ವರ್ಷಗಳ ವಾರ್ಷಿಕ ಆದಾಯ ಮತ್ತು 2013 ಮತ್ತು 2014 ರ ವಾರ್ಷಿಕ ಆದಾಯವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿಲ್ಲ ಎಂದು ಪ್ರತಿಪಾದಿಸಲಾಗಿದೆ.
ಮಿಶ್ರಾ ಅವರ ಸ್ಥಿರಾಸ್ತಿ ರಿಟರ್ನ್ಸ್ ಅನ್ನು ಅಪ್‌ಲೋಡ್ ಮಾಡಲು ವಿಫಲವಾದ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ಮತ್ತು ಮುಂದಿನ ಅಗತ್ಯ ಕ್ರಮವನ್ನು ಪ್ರಾರಂಭಿಸಬೇಕು ಎಂದು ಪ್ರಾರ್ಥಿಸಲಾಗಿದೆ.