×
Ad

ಗುಜರಾತ್ ನಲ್ಲಿ ಮೊದಲ ಒಮೈಕ್ರಾನ್ ಪ್ರಕರಣ ಪತ್ತೆ: ಭಾರತದಲ್ಲಿ ಮೂರನೇ ಪ್ರಕರಣ

Update: 2021-12-04 15:21 IST
ಸಾಂದರ್ಭಿಕ ಚಿತ್ರ(PTI)

ಹೊಸದಿಲ್ಲಿ: ಝಿಂಬಾಬ್ವೆಯಿಂದ ಗುಜರಾತ್ ಗೆ ಹಿಂದಿರುಗಿದ್ದ ವ್ಯಕ್ತಿಗೆ ಒಮೈಕ್ರಾನ್ ಸೋಂಕು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಶನಿವಾರ ಮಾಹಿತಿ ನೀಡಿದೆ. 

ಝಿಂಬಾಬ್ವೆಯಿಂದ ಬಂದಿದ್ದ ಗುಜರಾತ್ ಜಾಮ್ ನಗರದ ನಿವಾಸಿ 72 ಹರೆಯದ ವ್ಯಕ್ತಿಗೆ ಕೋವಿಡ್ ಸೋಂಕು ದೃಡಪಟ್ಟಿತ್ತು. ಈಗ ಅವರಿಗೆ ಒಮೈಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಆಯುಕ್ತ ಜೈ ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಇದು ಭಾರತದಲ್ಲಿ ಒಮೈಕ್ರಾನ್ ದೃಢಪಟ್ಟ ಮೂರನೇ ಪ್ರಕರಣ. ಮೊದಲ ಎರಡು ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News