ಗೋವಾ: ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ ಮೈತ್ರಿ

Update: 2021-12-06 10:06 GMT

ಹೊಸದಿಲ್ಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಂತಿಮವಾಗಿ ಗೋವಾದಲ್ಲಿ ತನ್ನ ಪ್ರಾದೇಶಿಕ ಪಾಲುದಾರ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಸುಧೀನ್ ಧವಳೀಕರ್ ಮುಂದಾಳತ್ವದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ (ಎಂಜಿಪಿ) ಇಂದು ತೃಣಮೂಲ ಕಾಂಗ್ರೆಸ್ ಜೊತೆ ಮೈತ್ರಿಯನ್ನು ಘೋಷಿಸಿದೆ.

2017ರಲ್ಲಿ 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಬಿಜೆಪಿಯು ಎಂಜಿಪಿಯಂತಹ ಸಣ್ಣ ಪಕ್ಷಗಳು ಹಾಗೂ ಪಕ್ಷೇತರರೊಂದಿಗೆ ಸರಕಾರವನ್ನು ರಚಿಸಿತ್ತು.

ಗೋವಾದಲ್ಲಿ ಮನೋಹರ್ ಪಾರಿಕ್ಕರ್ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಸುಧೀನ್ ಧವಳೀಕರ್ ಅವರನ್ನು ಮಾರ್ಚ್ 2019 ರಲ್ಲಿ ಪಾರಿಕ್ಕರ್ ನಿಧನರಾದ ನಂತರ   ಪ್ರಮೋದ್ ಸಾವಂತ್ ಅವರು ಅಧಿಕಾರ ವಹಿಸಿಕೊಂಡ ನಂತರ ಅನೌಪಚಾರಿಕವಾಗಿ ಕೈಬಿಡಲಾಯಿತು.

ಧವಳೀಕರ್ ಅವರ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು. ಕೇವಲ ಒಬ್ಬ ಶಾಸಕರೊಂದಿಗೆ ಬಿಜೆಪಿ ಪಕ್ಷದ ಸಖ್ಯ ತೊರೆದರು.

ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಗೋವಾದ ಹಿರಿಯ ರಾಜಕಾರಣಿ ಮತ್ತು ರಾಜ್ಯಸಭಾ ಸಂಸದ ಲುಜಿನ್ಹೊ ಫಲೈರೊ ಅವರು ಹೊಸ ಮೈತ್ರಿಯನ್ನು ಘೋಷಿಸುವಾಗ ತೆ ಉಪಸ್ಥಿತರಿದ್ದರು.

ಗೋವಾದ 40 ಸ್ಥಾನಗಳ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News