ಒಮೈಕ್ರಾನ್‌ ಕಳವಳ: ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಜನವರಿ 31ರವರೆಗೆ ರದ್ದು

Update: 2021-12-09 19:33 GMT

ಹೊಸದಿಲ್ಲಿ, ಡಿ. 9: ಕೊರೋನ ವೈರಸ್ ನ ರೂಪಾಂತರ ಪ್ರಬೇಧ ಒಮೈಕ್ರಾನ್ ಸೋಂಕು ಹರಡುವ ಕಳವಳ ಹೆಚ್ಚುತ್ತಿರುವ ನಡುವೆ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸೇವೆಯನ್ನು ಮುಂದಿನ ವರ್ಷ ಜನವರಿ 31ರ ವರೆಗೆ ರದ್ದುಪಡಿಸಲಾಗುವುದು ಎಂದು ನಾಗರಿಕ ವಿಮಾನ ಯಾನದ ನಿರ್ದೇಶನಾಲಯ (ಡಿಜಿಸಿಎ) ಗುರುವಾರ ಹೇಳಿದೆ. ಆದರೆ, ಅಂತಾರಾಷ್ಟ್ರೀಯ ಕಾರ್ಗೊ ವಿಮಾನಗಳಿಗೆ ಹಾಗೂ ನಿರ್ದಿಷ್ಟವಾಗಿ ಅನುಮೋದಿಸಲಾದ ವಿಮಾನಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ತಿಳಿಸಿದೆ. 

ಡಿಸೆಂಬರ್ 15ರಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಮರು ಆರಂಭಿಸುವ ನಿರ್ಧಾರವನ್ನು ಡಿಜಿಸಿಎ ಡಿಸೆಂಬರ್ 1ರಂದು ಮುಂದೂಡಿತ್ತು. ಗುರುವಾರ ಸುತ್ತೋಲೆ ಹೊರಡಿಸಿರುವ ಡಿಜಿಸಿಎ ‘‘2022 ಜನವರಿ 31ರ ವರೆಗೆ ಭಾರತದಿಂದ ನಿರ್ಗಮಿಸುವ ಹಾಗೂ ಆಗಮಿಸುವ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಸೇವೆ ರದ್ದುಗೊಳಿಸುವುದನ್ನು ವಿಸ್ತರಿಸಲು ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News