ನೇರ, ದಿಟ್ಟ ಬರವಣಿಗೆ

Update: 2021-12-15 18:07 GMT

ಮಾನ್ಯರೇ,

ಡಿಸೆಂಬರ್ 13 ಸೋಮವಾರದ ‘ವಾರ್ತಾಭಾರತಿ’ಯಲ್ಲಿ ಸನತ್ ಕುಮಾರ್ ಬೆಳಗಲಿ ಅವರ ‘ಮಠ ಬಿಟ್ಟು ಮೊಟ್ಟೆಗೆ ಗಂಟು ಬಿದ್ದ ಮಠಾಧೀಶರು’ ಎಂಬ ಲೇಖನವನ್ನು ಹಲವು ಬಾರಿ ಓದಿ;ಬಹಳವಾಗಿ ಮೆಚ್ಚಿಕೊಂಡಿದ್ದೇನೆ. ಆ ನೇರ, ದಿಟ್ಟ ಬರವಣಿಗೆಯ ಸತ್ಯಾಂಶಗಳು ಎಷ್ಟು ಮಠಾಧೀಶರಿಗೆ ಅರ್ಥವಾಗುತ್ತೋ?
ಆಕಸ್ಮಾತ್ ಅರ್ಥ ಮಾಡಿಕೊಂಡರೂ, ತಮ್ಮ ಮಠ, ತಮ್ಮ ಸಮುದಾಯಗಳ ಬಗ್ಗೆ ಮಾತ್ರ ಚಿಂತಿಸುವವರಿಂದ ಪ್ರಗತಿಪರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗದ ಜಾತೀಯತೆಯ ಸುಳಿಯಲ್ಲಿ ನಾವು ಸಿಲುಕಿಕೊಂಡಿದ್ದೇವೆ.
ಮಕ್ಕಳ ಆರೋಗ್ಯಕರ ಬೆಳವಣಿಗೆ, ಓದು ಇವುಗಳ ಬಗ್ಗೆ ನಿಜವಾದ ಕಳಕಳಿ ಎಷ್ಟು ಜನರಿಗೆ ಇದ್ದೀತು? ಈಗ ಸೃಷ್ಟಿಯಾಗಿರುವ ಈ ಅರ್ಥರಹಿತ ಆಕ್ಷೇಪಣೆಗಳಿಗೆ ಸರಕಾರ ತಲೆಬಾಗಬಾರದು. ಶಾಲಾ ಮಕ್ಕಳಿಗೆ ಸಿಗಬೇಕಾದ ಈ ಮೊಟ್ಟೆ ಸೌಲಭ್ಯ ಮುಂದುವರಿಯಲಿ.

Writer - -ಮಂಜುಳಾ ರಾವ್ ಬೆಂಗಳೂರು

contributor

Editor - -ಮಂಜುಳಾ ರಾವ್ ಬೆಂಗಳೂರು

contributor

Similar News