ಶಾಲೆಗೆ ಮರಳಿ ಬಾ ಶಿಕ್ಷಕ!

Update: 2021-12-17 18:15 GMT

ಮಾನ್ಯರೇ,

ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳನ್ನು ಶಾಲೆಗೆ ಕರೆತರಲು ‘ಮರಳಿ ಬಾ ಶಾಲೆಗೆ’ ಎನ್ನುತ್ತಿದ್ದ ಶಿಕ್ಷಣ ಇಲಾಖೆ ಈಗ ಅನ್ಯ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮರಳಿ ಮಾತೃ ಇಲಾಖೆಗೆ ಕರೆತರಲು (‘ಶಾಲೆಗೆ ಮರಳಿ ಬಾ ಶಿಕ್ಷಕ’ ಎನ್ನುವಂತೆ) ಪಣ ತೊಟ್ಟಿರುವುದು ಸ್ವಾಗತಾರ್ಹ ಕ್ರಮವಾಗಿದೆ.
 ಇದರಿಂದ ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುವುದರೊಂದಿಗೆ ಶಿಕ್ಷಕರ ಕೊರತೆ ಸಮಸ್ಯೆಯೂ ನಿವಾರಣೆಯಾಗಬಹುದು. ಆದರೆ ಅನ್ಯ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವವರು ರಾಜಕೀಯ ಪ್ರಭಾವ ಬೀರಿ ಮಾತೃ ಇಲಾಖೆಗೆ ಮರಳಲು ಹಿಂದೇಟು ಹಾಕುತ್ತಿದ್ದು, ಇವರನ್ನು ಕರೆತರುವುದೇ ಇಲಾಖೆಗೆ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಇಲಾಖೆಯು ಯಾವುದೇ ರಾಜಕೀಯ ಒತ್ತಡಕ್ಕೊಳಗಾಗದೆ, ಕಠಿಣ ಕ್ರಮದ ಮೂಲಕ ಜಾರಿಗೊಳಿಸಬೇಕಿದೆ.
ಒಂದು ವೇಳೆ ಎಲ್ಲಾ ಅನ್ಯ ಇಲಾಖೆಗೆ ನಿಯೋಜನೆಗೊಂಡ ಶಿಕ್ಷಕರು ಮರಳಿ ಇಲಾಖೆಗೆ ಬಂದರೇ, ಶಿಕ್ಷಣ ಇಲಾಖೆಯ ಸಂಪೂರ್ಣ ಚಿತ್ರಣವೇ ಬದಲಾಗಲಿದೆ!

Writer - -ಕೆ.ಟಿ.ಆರ್., ಬೆಂಗಳೂರು

contributor

Editor - -ಕೆ.ಟಿ.ಆರ್., ಬೆಂಗಳೂರು

contributor

Similar News