ಭಾರತದ ಕುರಿತು ಅಪಪ್ರಚಾರ: 20 ಯುಟ್ಯೂಬ್ ಚಾನೆಲ್‌ಗಳು,2 ವೆಬ್‌ಸೈಟ್‌ಗಳಿಗೆ ನಿಷೇಧ

Update: 2021-12-21 15:40 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ಡಿ.21: ಪಾಕಿಸ್ತಾನದಿಂದ ಭಾರತ ವಿರೋಧಿ ಪ್ರಚಾರವನ್ನು ನಡೆಸುತ್ತಿದ್ದ ಆರೋಪದಲ್ಲಿ 20 ಯುಟ್ಯೂಬ್ ಚಾನೆಲ್‌ಗಳು ಮತ್ತು ಎರಡು ವೆಬ್‌ಸೈಟ್‌ಗಳನ್ನು ಕೇಂದ್ರವು ನಿಷೇಧಿಸಿದೆ.

ನಿಷೇಧಿಸಲ್ಪಟ್ಟಿರುವ ಚಾನೆಲ್‌ಗಳಲ್ಲಿ ನಯಾ ಪಾಕಿಸ್ತಾನ ಗ್ರೂಪ್‌ಗೆ ಸೇರಿದ 15 ಚಾನೆಲ್‌ಗಳು ಸೇರಿದ್ದು,ದಿ ನೇಕೆಡ್ ಟ್ರುತ್,48 ನ್ಯೂಸ್ ಮತ್ತು ಜುನೈದ್ ಹಲೀಮ್ ಅಫಿಷಿಯಲ್ ಇತ್ಯಾದಿಗಳು ಇತರ ಚಾನೆಲ್‌ಗಳಾಗಿವೆ.

ಈ ಯುಟ್ಯೂಬ್ ಚಾನೆಲ್‌ಗಳು ಒಟ್ಟು ಅಂದಾಜು 35 ಲಕ್ಷ ಚಂದಾದಾರನ್ನು ಹೊಂದಿದ್ದು,ಭಾರತಕ್ಕೆ ಸಂಬಂಧಿಸಿದ ಅವುಗಳಲ್ಲಿಯ ವಿಷಯಗಳನ್ನು 50 ಕೋ.ಗೂ.ಅಧಿಕ ಸಲ ವೀಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಯುಟ್ಯೂಬ್ ಮತ್ತು ದೂರಸಂಪರ್ಕ ಇಲಾಖೆಗೆ ಪತ್ರ ಬರೆದಿದ್ದ ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಅಪೂರ್ವಚಂದ್ರ ಅವರು,ಈ ಯುಟ್ಯೂಬ್ ಚಾನೆಲ್‌ಗಳಲ್ಲಿಯ ವಿಷಯಗಳು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆಯನ್ನುಂಟು ಮಾಡುತ್ತಿರುವುದರಿಂದ ಅವುಗಳನ್ನು ತಕ್ಷಣ ತಡೆಯುವಂತೆ ನಿರ್ದೇಶ ನೀಡಿದ್ದರು.

ಪಾಕಿಸ್ತಾನದ ಐಎಸ್‌ಐ ನೆರವಿನಿಂದ ಈ ಆನ್‌ಲೈನ್ ಅಪಪ್ರಚಾರವನ್ನು ನಡೆಸಲಾಗುತ್ತಿತ್ತು ಎನ್ನಲಾಗಿದೆ. ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿಕೊಂಡಿರುವ ವೆಬ್‌ಸೈಟ್‌ಗಳನ್ನು ನಿಷೇಧಿಸಲು ಇದೇ ಮೊದಲ ಬಾರಿಗೆ ಮಾಹಿತಿ  ತಂತ್ರಜ್ಞಾನ ನಿಯಮಗಳು,2021ರಡಿ ತುರ್ತು ಅಧಿಕಾರವನ್ನು ಉಲ್ಲೇಖಿಸಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News