ಯುಎಪಿಎ ಅಡಿ 4,690 ಮಂದಿಯನ್ನು ಬಂಧಿಸಲಾಗಿದ್ದು, 149 ಮಂದಿಯ ಆರೋಪ ಸಾಬೀತಾಗಿದೆ: ಕೇಂದ್ರ

Update: 2021-12-22 11:20 GMT

ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 4,690 ಜನರನ್ನು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ (UAPA) ಬಂಧಿಸಲಾಗಿದೆ ಮತ್ತು ಅವರಲ್ಲಿ 149 ಜನರ ಅಪರಾಧ ಸಾಬೀತಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.

ಯುಎಪಿಎ ಅಡಿಯಲ್ಲಿ 2018 ರಲ್ಲಿ 1,421, 2019 ರಲ್ಲಿ 1,948 ಮತ್ತು 2020 ರಲ್ಲಿ 1,321 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

2018ರಲ್ಲಿ ಒಟ್ಟು 35 ಮಂದಿ, 2019ರಲ್ಲಿ 34 ಮಂದಿ ಹಾಗೂ 2020ರಲ್ಲಿ 80 ಮಂದಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಅವರು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಶಿಕ್ಷೆಯು ವಿಸ್ತಾರವಾದ ನ್ಯಾಯಾಂಗ ಪ್ರಕ್ರಿಯೆಯ ಫಲಿತಾಂಶವಾಗಿದೆ ಮತ್ತು ವಿಚಾರಣೆಯ ಅವಧಿ, ಸಾಕ್ಷ್ಯಗಳ ಮೌಲ್ಯಮಾಪನ, ಸಾಕ್ಷಿಗಳ ಪರೀಕ್ಷೆಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. "ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ಯುಎಪಿಎಯಲ್ಲಿಯೇ ಅಂತರ್ಗತ ಸುರಕ್ಷತೆಗಳು ಸೇರಿದಂತೆ ಸಾಕಷ್ಟು ಸಾಂವಿಧಾನಿಕ, ಸಾಂಸ್ಥಿಕ ಮತ್ತು ಶಾಸನಬದ್ಧ ಸುರಕ್ಷತೆಗಳಿವೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News