ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನ್ಯೂಝಿಲ್ಯಾಂಡ್ ಆಟಗಾರ ರಾಸ್‌ ಟೇಲರ್ ನಿವೃತ್ತಿ

Update: 2021-12-30 06:58 GMT
Photo: NZC

ಆಕ್ಲಾಂಡ್: ಪ್ರಸಕ್ತ ದೇಶೀಯ ಋತುವಿನ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ನ್ಯೂಝಿಲ್ಯಾಂಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಹೇಳಿದ್ದಾರೆ.

ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಾಟವಾಡುವ ಮೂಲಕ  ಅವರು ನ್ಯೂಝಿಲ್ಯಾಂಡ್‌ ತಂಡಕ್ಕಾಗಿ ಡೇನಿಯಲ್ ವೆಟ್ಟೋರಿ ಅವರ 112 ಟೆಸ್ಟ್‌ಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ ಮತ್ತು ಇದು ಅವರ ಕೊನೆಯ ಪಂದ್ಯವಾಗಿದೆ.

ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಬ್ಲ್ಯಾಕ್ ಕ್ಯಾಪ್ಸ್ ಟೆಸ್ಟ್ ಸರಣಿಯಲ್ಲಿ ಟೇಲರ್ ಆಡುವುದಿಲ್ಲವಾದರೂ, ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಮಾರ್ಚ್ ಅಂತ್ಯದಲ್ಲಿ ಮತ್ತು ಏಪ್ರಿಲ್ ಆರಂಭದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತವರಿನಲ್ಲಿ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು ಆಡಲಿದ್ದಾರೆ.

ಏಪ್ರಿಲ್ 4 ರಂದು ಟೇಲರ್ ಅವರ ತವರು ಪಟ್ಟಣವಾದ ಹ್ಯಾಮಿಲ್ಟನ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್‌ ಪಂದ್ಯಾಟವು ಅವರ ಕೊನೆಯ ಪಂದ್ಯವಾಗಲಿದೆ.

"ಇದೊಂದು ಅದ್ಭುತ ಪ್ರಯಾಣವಾಗಿದೆ ಮತ್ತು ನಾನು ಇರುವವರೆಗೂ ನನ್ನ ದೇಶವನ್ನು ಪ್ರತಿನಿಧಿಸಿದ್ದಕ್ಕಾಗಿ ಅದೃಷ್ಟಶಾಲಿಯಾಗಿದ್ದೇನೆ" ಎಂದು ಟೇಲರ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಕೆಲವು ಶ್ರೇಷ್ಠರೊಂದಿಗೆ ಜೊತೆಯಾಗಿ ಮತ್ತು ವಿರುದ್ಧವಾಗಿ ಆಡುವುದು ಹಾಗೂ ದಾರಿಯುದ್ದಕ್ಕೂ ಹಲವಾರು ನೆನಪುಗಳು ಮತ್ತು ಸ್ನೇಹವನ್ನು ಸೃಷ್ಟಿಸುವುದು  ವಿಶೇಷತೆಯಾಗಿದೆ. ಆದರೆ ಎಲ್ಲಾ ಒಳ್ಳೆಯ ವಿಚಾರಗಳು ಕೊನೆಗೊಳ್ಳಬೇಕು ಮತ್ತು ಈಸಮಯವು ನನಗೆ ಸರಿಯಾಗಿದೆ ಎಂದು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News