ವಿಶೇಷ ಚೇತನರ ಗೋಳು ಕೇಳುವವರಾರು?

Update: 2022-01-06 18:22 GMT

ಮಾನ್ಯರೇ,

ಮಧ್ಯಮವರ್ಗದ ಕುಟುಂಬದ ವಿಶೇಷ ಚೇತನರಿಗೆ ಬಿಪಿಎಲ್ ಪಡಿತರ ಚೀಟಿ ದೊರೆಯುತ್ತಿಲ್ಲ. ಇಡೀ ಕುಟುಂಬವನ್ನು ವಿಶೇಷ ಚೇತನರೊಬ್ಬರೇ ಕನಿಷ್ಠ ದಿನಕೂಲಿಯಲ್ಲಿ ದುಡಿದು ಸಲಹುತ್ತಿದ್ದರೂ ಆ ಕುಟುಂಬ ಎಪಿಎಲ್ ಪಡಿತರ ಚೀಟಿ ಹೊಂದಿದುದಕ್ಕಾಗಿ ಹಿಂದೆ ದೊರೆಯುತ್ತಿದ್ದ ಮಾಸಾಶನವನ್ನು ರದ್ದು ಪಡಿಸಲಾಗುತ್ತಿದೆ. ಅಲ್ಲದೆ ಬಿಪಿಎಲ್ ಪಡಿತರ ಚೀಟಿಯನ್ನೂ ನೀಡುತ್ತಿಲ್ಲ. ಹೀಗಾಗಿ ವಿಶೇಷ ಚೇತನರು ತಮ್ಮ ಕುಟುಂಬದ ಹಾಗೂ ತಮ್ಮ ವೈದಕೀಯ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ವಿಶೇಷ ಚೇತನರು ಕನಿಷ್ಠ ದಿನಕೂಲಿಯಲ್ಲಿ ದ.ಕ. ಜಿಲ್ಲೆಯಲ್ಲಿನ ಕೇಂದ್ರ ಹಾಗೂ ರಾಜ್ಯ ಸರಕಾರದ ಕಚೇರಿಗಳಲ್ಲಿ, ಕೇಂದ್ರ ಸರಕಾರದ ಅಧೀನದ ಕೈಗಾರಿಕೆ, ಕಬ್ಬಿಣ ಅದಿರು ಸಂಸ್ಕರಣಾ ಸಂಸ್ಥೆ, ಸರ್ವಋತು ಬಂದರು, ವಿಶೇಷ ಆರ್ಥಿಕ ವಲಯದ ಸಂಸ್ಥೆಗಳಲ್ಲಿ ಹಾಗೂ ಪೆಟ್ರೋಲಿಯಂ ಸಂಸ್ಕರಣಾ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ದಿನಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೂ ಅವರಿಗಿನ್ನೂ ಸೇವಾ ಭದ್ರತೆ ದೊರಕಿಲ್ಲ. ಕೆಲವೊಂದು ಸಂಸ್ಥೆಗಳಲ್ಲಿನ ಆಡಳಿತಗಳು ವಿಶೇಷ ಚೇತನ ಗುತ್ತಿಗೆ ದಿನಕೂಲಿ ಕಾರ್ಮಿಕರ ಬಗ್ಗೆ ದಾಖಲೆಯನ್ನೂ ಇಟ್ಟಿಲ್ಲ ಎನಿಸುತ್ತಿದೆ. ಅಲ್ಲದೆ ವಿಶೇಷ ಚೇತನ ಗುತ್ತಿಗೆ ದಿನಕೂಲಿ ಕಾರ್ಮಿಕರೊಡನೆ ಇತರರ ಅಸಭ್ಯ ವರ್ತನೆಯನ್ನು ತಡೆಯಲು ಆಡಳಿತವು ಯಾವುದೇ ನೀತಿ ನಿಯಮವನ್ನು ಮಾಡುತ್ತಿಲ್ಲ.
ರಾಜ್ಯ ಸರಕಾರದ ಜಿಲ್ಲಾ ಪ್ರಧಾನ ಆಸ್ಪತ್ರೆಯಿಂದ ಹಾಗೂ ಜಿಲ್ಲಾಡಳಿತದಿಂದ ಪ್ರಮಾಣೀಕರಿಸಿದ ವಿಶೇಷ ಚೇತನರ ಅಧಿಕೃತವಾದ ಗುರುತು ಚೀಟಿ ಇದ್ದರೂ, ಕೇಂದ್ರ ಸರಕಾರದ ವಿಶೇಷ ಚೇತನ ಗುರುತು ಚೀಟಿ ಖ್ಞಿಜಿಟ್ಠಿಛಿ ಈಜಿಚಿಜ್ಝಿಜಿಠಿ ಐಈಗಾಗಿ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಹಲವು ಸಲ ಅಲೆದಾಡಬೇಕಾಗಿದೆ.
ಈ ಎಲ್ಲ ಸಮಸ್ಯೆಗಳ ಬಗ್ಗೆ ವಿಕಲ ಚೇತನ/ವಿಶೇಷ ಚೇತನರ ಸೇವಾ ಸಂಸ್ಥೆಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾನವೀಯ ದೃಷ್ಟಿಯಿಂದ ಗಮನ ಹರಿಸಬೇಕಾಗಿದೆ.
 

Writer - -ವಿಶೇಷ ಚೇತನರು, ಕಾಟಿಪಳ್ಳ

contributor

Editor - -ವಿಶೇಷ ಚೇತನರು, ಕಾಟಿಪಳ್ಳ

contributor

Similar News