×
Ad

ಲಂಚ ಸ್ವೀಕರಿಸುತ್ತಿದ್ದ ಆರೋಪ; ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂವರು ಎಸಿಬಿ ಬಲೆಗೆ

Update: 2022-01-13 16:40 IST

ಉಡುಪಿ, ಜ.13: ಭೂಪರಿರ್ತನೆಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದ ಆರೋಪದಡಿಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂವರ ಅಧಿಕಾರಿಗಳನ್ನು ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ವ್ಯಕ್ತಿಯೊಬ್ಬರ ಜಾಗದ ಭೂ ಪರಿವರ್ತನೆಗೆ ಸಂಬಂಧಿಸಿ ಪ್ರಾಧಿಕಾರದ ಅಧಿಕಾರಿಗಳು ಮೂರು ಲಕ್ಷ ರೂ. ಹಣದ ಬೇಡಿಕೆಯನ್ನು ಮುಂದಿಟ್ಟಿದ್ದರು ಎನ್ನಲಾಗಿದೆ.

ಈ ಬಗ್ಗೆ ನೀಡಿದ ದೂರಿನಂತೆ ಎಸಿಬಿ ಉಡುಪಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ, ಆರೋಪಿಗಳಾದ ಪ್ರಭಾರ ನಗರ ಯೋಜನಾ ಸದಸ್ಯ ಗುರುಪ್ರಸಾದ್, ಸಹಾಯಕ ನಗರ ಯೋಜನಾ ಸದಸ್ಯೆ ನಯೀಮ ಸಯೀದ್, ಗುಮಾಸ್ತ ಪ್ರಸಾದ್ ಎಂಬವರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News