ಉತ್ತರ ಪ್ರದೇಶದ ಪಕ್ಷಾಂತರ: ಆಶಾದಾಯಕ ಬೆಳವಣಿಗೆಯಲ್ಲ

Update: 2022-01-16 18:23 GMT

 ಮಾನ್ಯರೆ,

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಹಲವರು ಆಶಾದಾಯಕವಾಗಿ ಸ್ವೀಕರಿಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಬಿಜೆಪಿಯೊಂದಿಗೆ ಗುರುತಿಸಿ, ಅದರ ಹಿಂಸಾಚಾರ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ರಾಜಕಾರಣಿಗಳು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಎಸ್‌ಪಿ ಗೆದ್ದರೂ, ಸರಕಾರದಲ್ಲಿ ಅದೇ ಕೋಮುವಾದಿ ನಾಯಕರೇ ಆಯಕಟ್ಟಿನ ಜಾಗದಲ್ಲಿರುತ್ತಾರೆ ಎಂದಾಯಿತು. ಇಂದು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರುತ್ತಿರುವವರು ಬಿಜೆಪಿಯ ಕೋಮುವಾದಿ ಸಿದ್ಧಾಂತವನ್ನು ಎಷ್ಟರಮಟ್ಟಿಗೆ ವಿರೋಧಿಸುತ್ತಾರೆ? ಇವರ ನೇರ ಭಿನ್ನಾಭಿಪ್ರಾಯ ಆದಿತ್ಯನಾಥ್ ಜೊತೆಗೇ ಹೊರತು, ಆರೆಸ್ಸೆಸ್ ಅಥವಾ ಮೋದಿಯ ಜೊತೆಗಲ್ಲ ಎನ್ನುವುದನ್ನು ಮೇಲ್ನೋಟಕ್ಕೆ ಅರ್ಥ ಮಾಡಿಕೊಳ್ಳಬಹುದು. ಪಕ್ಷಾಂತರ ಮಾಡಿದ ಬಳಿಕವಾದರೂ, ಆರೆಸ್ಸೆಸ್ ಅಥವಾ ಪ್ರಧಾನಿ ಮೋದಿಯ ವಿರುದ್ಧ ನೇರ ಟೀಕೆಯನ್ನು ಮಾಡುವ ನೈತಿಕ ಶಕ್ತಿ ಇವರಿಗಿಯೇ? ಎನ್ನುವುದು ಬಹುಮುಖ್ಯ ಪ್ರಶ್ನೆ. ಬಿಜೆಪಿಯನ್ನು ತೊರೆದ ಬೆನ್ನಿಗೇ ಓರ್ವ ನಾಯಕನ ಮೇಲೆ ಆದಿತ್ಯನಾಥ್ ಸರಕಾರ ದ್ವೇಷ ಭಾಷಣ ಮಾಡಿದ ಬಗ್ಗೆ ಬಂಧನದ ಆದೇಶ ಜಾರಿಗೊಳಿಸಿತು. ಅಂದರೆ, ಎಸ್‌ಪಿಗೆ ಸೇರ್ಪಡೆಯಾದವರ ನಿಜವಾದ ಯೋಗ್ಯತೆಯನ್ನು ಇದು ಹೇಳುತ್ತದೆ. ತಾವು ಮಾಡಿದ ಭಾಷಣಗಳ ಬಗ್ಗೆ ಈ ನಾಯಕರಿಗೆ ಈಗಲಾದರೂ ಪಶ್ಚಾತ್ತಾಪವಿದೆಯೇ?

ಒಟ್ಟಿನಲ್ಲಿ ಜಾತ್ಯತೀತ ಮುಖವಾಡದಲ್ಲಿರುವ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಅದೇ ಪಕ್ಷದ ಮೂಲಕ ಇವರು ಆರೆಸ್ಸೆಸ್ ಮತ್ತು ಸಂಘಪರಿವಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಾರೆ.ಹೊಸ ಬಾಟಲಿಯಲ್ಲಿ ಹಳೆಯ ವೈನು ಎಂದು ಇದನ್ನೇ ಹೇಳುವುದು. 

Writer - ನಿರುಪಮಾ, ಮೈಸೂರು

contributor

Editor - ನಿರುಪಮಾ, ಮೈಸೂರು

contributor

Similar News