ತ.ನಾಡಿನಲ್ಲಿ ಪೆರಿಯಾರ್ ಪ್ರತಿಮೆ ವಿರೂಪ : ಹಿಂದು ಮುನ್ನಾನಿ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ

Update: 2022-01-19 17:44 GMT
Photo : PTI

ಚೆನ್ನೈ,ಜ.19: ಸಾಮಾಜಿಕ ಸುಧಾರಕ ಪೆರಿಯಾರ್ ಇವಿ ರಾಮಸ್ವಾಮಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ಹಿಂದು ಮುನ್ನಾನಿಯ ಇಬ್ಬರು ಕಾರ್ಯಕರ್ತರ ವಿರುದ್ಧ ತಮಿಳುನಾಡು ಪೊಲೀಸರು ಗೂಂಡಾ ಕಾಯ್ದೆಯನ್ನು ಹೇರಿದ್ದಾರೆ.

ಆರೋಪಿಗಳಾದ ವಿ.ಅರುಣ ಕಾರ್ತಿಕ್ ಮತ್ತು ವಿ.ಮೋಹನರಾಜ್ ಅವರು ಕೊಯಿಮತ್ತೂರು ಜಿಲ್ಲೆಯ ವೆಲ್ಲೂರ ನಿವಾಸಿಗಳಾಗಿದ್ದು,ಪೆರಿಯಾರ ಪ್ರತಿಮೆಯ ಮುಖಕ್ಕೆ ಕೇಸರಿ ಬಣ್ಣವನ್ನು ಬಳಿದು,ಚಪ್ಪಲಿಗಳ ಹಾರವನ್ನು ತೊಡಿಸಿದ್ದರು.

ಜ.8ರಂದು ಈ ಘಟನೆ ನಡೆದಿದ್ದು,ಮರುದಿನ ಬೆಳಕಿಗೆ ಬಂದಿತ್ತು. ಇಬ್ಬರನ್ನೂ ಜ.11ರಂದು ಬಂಧಿಸಲಾಗಿದ್ದು,ಕೊಯಿಮತ್ತೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ದ್ರವಿಡರ್ ಕಳಗಂ ಮತ್ತು ತಂತೈ ಪೆರಿಯಾರ್ ದ್ರವಿಡರ್ ಕಳಗಂ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸಿ,ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

 ದ್ರಾವಿಡ ಆಂದೋಲನದ ಸ್ಥಾಪಕರಾಗಿದ್ದ ಪೆರಿಯಾರ್ ಲಿಂಗ ಮತ್ತು ಜಾತಿ ಅಸಮಾನತೆಯ ವಿರುದ್ಧ ಪ್ರತಿಭಟಿಸಿದ್ದರು. ತಮಿಳುನಾಡಿನಲ್ಲಿ 2021ರಿಂದ ಅವರ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News