ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಭಾಗಿ

Update: 2022-01-26 13:23 GMT
ಶಿವಾಂಗಿ ಸಿಂಗ್(photo:twitter/@MahimaShastri)

ಹೊಸದಿಲ್ಲಿ: ದೇಶದ ಪ್ರಥಮ ಮಹಿಳಾ ರಫೇಲ್ ಯುದ್ಧವಿಮಾನದ  ಪೈಲಟ್ ಶಿವಾಂಗಿ ಸಿಂಗ್ ಅವರು ಇಂದು ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾರತೀಯ ವಾಯುಪಡೆಯ ಟ್ಯಾಬ್ಲೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪರೇಡ್‍ನಲ್ಲಿ ಇಲ್ಲಿಯ ತನಕ ಭಾಗವಹಿಸಿದ ಯುದ್ಧವಿಮಾನದ ಎರಡನೇ ಮಹಿಳಾ ಪೈಲಟ್ ಶಿವಾಂಗಿ ಆಗಿದ್ದಾರೆ. ಕಳೆದ ವರ್ಷದ ಪರೇಡ್‍ನಲ್ಲಿ ಯುದ್ಧವಿಮಾನ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಭಾಗವಹಿಸಿದ್ದರು.

ಶಿವಾಂಗಿ ಸಿಂಗ್ ಅವರು ವಾರಣಾಸಿಯವರಾಗಿದ್ದು 2017ರಲ್ಲಿ ಭಾರತೀಯ ವಾಯುಪಡೆಯನ್ನು ಸೇರಿದ್ದರು. ರಫೇಲ್ ಯುದ್ಧವಿಮಾನ ಹಾರಾಟ ನಡೆಸುವ ಮೊದಲು ಅವರು ಮಿಗ್ 21 ಬೈಸನ್ ವಿಮಾನ ಹಾರಾಟ ನಡೆಸುತ್ತಿದ್ದರು.

ಪಂಜಾಬ್‍ನ ಅಂಬಾಲದಲ್ಲಿರುವ ಭಾರತೀಯ ವಾಯುಸೇನೆಯ ಗೋಲ್ಡನ್ ಏರೋಸ್ ಸ್ಕ್ವಾಡ್ರನ್ ಭಾಗವಾಗಿದ್ದಾರೆ ಶಿವಾಂಗಿ.

ಈ ಬಾರಿ ಭಾರತೀಯ ವಾಯುಪಡೆಯ ಟ್ಯಾಬ್ಲೋ "ಐಎಎಫ್ ಭವಿಷ್ಯವನ್ನು ಪರಿವರ್ತಿಸುತ್ತಿದೆ" ಎಂಬ ಥೀಮ್ ಆಧರಿತವಾಗಿತ್ತು. ಈ ಟ್ಯಾಬ್ಲೋದಲ್ಲಿ ರಫೇಲ್ ಯುದ್ಧವಿಮಾನ ಮಾದರಿ ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಮತ್ತು 3ಡಿ ರಾರಾಡ್ ಅಶ್ಲೇಷ ಎಂಕೆ-1 ಇದರ ಮಾದರಿಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News