2022-23 ರೊಳಗೆ 5ಜಿ ಮೊಬೈಲ್ ಸೇವೆಗಳು ಆರಂಭ: ನಿರ್ಮಲಾ ಸೀತಾರಾಮನ್

Update: 2022-02-01 07:53 GMT

ಹೊಸದಿಲ್ಲಿ: 2022-23ರ ಒಳಗೆ 5ಜಿ ಮೊಬೈಲ್‌ ಸೇವೆಗಳನ್ನು ಆರಂಭಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.

ವರದಿಗಳ ಪ್ರಕಾರ, ದಿಲ್ಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಹಾಗೂ  ಅಹಮದಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ಆರಂಭಿಸಲಾಗುವುದು.

ಏರ್‌ಟೆಲ್, ರಿಲಯನ್ಸ್ ಜಿಯೋ  ಹಾಗೂ  ವಿಐ ಸೇರಿದಂತೆ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ 5ಜಿ ನೆಟ್‌ವರ್ಕ್‌ಗಳನ್ನು ವಿವಿಧ ಪ್ರಯೋಗಗಳ ಅಡಿಯಲ್ಲಿ ಪರೀಕ್ಷಿಸುತ್ತಿವೆ. 5ಜಿ ಆರಂಭಕ್ಕೆ ಅಂತಿಮ ಹಂತವನ್ನು ರೂಪಿಸುವ  ಸ್ಪೆಕ್ಟ್ರಮ್ ಹರಾಜಿನ ಕುರಿತು ಸರಕಾರವು ಟೆಲ್ಕೋಸ್ ಹಾಗೂ  ಇತರ ಪಾಲುದಾರರೊಂದಿಗೆ ಚರ್ಚಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News