×
Ad

ಮುಂಬೈ: ವಿದ್ಯಾರ್ಥಿಗಳಿಗೆ ಪ್ರತಿಭಟನೆಗೆ ಪ್ರಚೋದನೆ; ಹಿಂದೂಸ್ತಾನಿ ಭಾವು ಬಂಧನ

Update: 2022-02-01 15:27 IST
Photo: twitter

ಮುಂಬೈ: 10 ಮತ್ತು 12 ನೇ ತರಗತಿಗಳಿಗೆ ಆನ್‌ಲೈನ್ ಪರೀಕ್ಷೆಗೆ ಒತ್ತಾಯಿಸಿ ಸೋಮವಾರ ಧಾರಾವಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆದಿರುವ ಹಿಂದೂಸ್ತಾನಿ ಭಾವು ಯಾನೆ ವಿಕಾಸ್ ಫಾಟಕ್ ಅವರನ್ನು ಮಂಗಳವಾರ ಮುಂಬೈನಲ್ಲಿ ಧಾರಾವಿ ಪೊಲೀಸರು ಬಂಧಿಸಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆ ಆನ್‌ಲೈನ್ ಪರೀಕ್ಷೆಗಳಿಗೆ ಒತ್ತಾಯಿಸಿ ಸೋಮವಾರ ಮುಂಬೈ ಹಾಗು  ನಾಗ್ಪುರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯ ನಂತರ  ಯೂಟ್ಯೂಬರ್ ಹಿಂದೂಸ್ತಾನಿ ಭಾವು ಅವರು ಮಹಾರಾಷ್ಟ್ರದ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್ ಅವರ ನಿವಾಸಿ ಬಳಿಯಿರುವ ಧಾರಾವಿ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಸೇರುವಂತೆ ವೀಡಿಯೊದಲ್ಲಿ ಕರೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಹಾಜರಿದ್ದ ಯೂಟ್ಯೂಬರ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸೋಮವಾರ ಹೇಳಿದ್ದಾರೆ.

ಸೋಮವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ನಾಗಪುರದಲ್ಲಿ ಧರಣಿ ನಿರತ ವಿದ್ಯಾರ್ಥಿಗಳು ಎರಡು ಬಸ್‌ಗಳಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News