×
Ad

ರೆಪೊ ದರ ಯಥಾಸ್ಥಿತಿ: ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್

Update: 2022-02-10 10:38 IST

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಇಂದು ನೀತಿ ನಿರ್ಣಯವನ್ನು ಪ್ರಕಟಿಸಿದೆ.

ಹಣಕಾಸು ನೀತಿ ಸಮಿತಿಯು ಬೆಂಚ್‌ಮಾರ್ಕ್ ಬಡ್ಡಿ ದರ ಅಥವಾ ರೆಪೊ ದರದಲ್ಲಿ ಯಥಾಸ್ಥಿತಿಯನ್ನು 4 ಶೇ. ನಲ್ಲಿ ಉಳಿಸಿಕೊಂಡಿದೆ. ಇದು ಸತತ ಹತ್ತನೇ ಬಾರಿಗೆ ದರ ಬದಲಾಗದೆ ಉಳಿದಿದೆ.

ಸೆಂಟ್ರಲ್ ಬ್ಯಾಂಕ್  ಕೊನೆಯದಾಗಿ ಮೇ 22, 2020 ರಂದು ನೀತಿ ದರವನ್ನು ಪರಿಷ್ಕರಿಸಿದೆ.

 ಐಎಂಎಫ್   ಯೋಜನೆಗಳ ಪ್ರಕಾರ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ವರ್ಷದಿಂದ ವರ್ಷಕ್ಕೆ ವೇಗವಾಗಿ ಬೆಳೆಯಲು ಸಿದ್ಧವಾಗಿದೆ. ಈ ಚೇತರಿಕೆಯು ದೊಡ್ಡ ಪ್ರಮಾಣದ ವ್ಯಾಕ್ಸಿನೇಷನ್ ಮತ್ತು ನಿರಂತರ ಆರ್ಥಿಕ ಮತ್ತು ವಿತ್ತೀಯ ಬೆಂಬಲದಿಂದ ಪ್ರೇರಿತವಾಗಿದೆ ಎಂದು ಆರ್ ಬಿಐ ಗವರ್ನರ್ ತಮ್ಮ ಎಂಪಿಸಿ ಭಾಷಣದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News