ಹೊಸದಿಲ್ಲಿ: ಹಿಜಾಬ್ ಬೆಂಬಲಿಸಿ ಪ್ರತಿಭಟನೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
Update: 2022-02-10 16:49 IST
ಹೊಸದಿಲ್ಲಿ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ವಿರುದ್ಧ ಗುರುವಾರ ದೆಹಲಿಯ ಚಾಣಕ್ಯಪುರಿಯಲ್ಲಿರುವ ಕರ್ನಾಟಕ ಭವನದಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಭವನದ ಹೊರಗೆ ಸೇರಿ ಪ್ರತಿಭಟನೆ ನಡೆಸಲಿದ್ದರು. ಪ್ರತಿಭಟನಾ ಸ್ಥಳಕ್ಕೆ ಅವರು ತಲುಪುವ ಮೊದಲೇ ಅವರಲ್ಲಿ ಹೆಚ್ಚಿನವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಅವರನ್ನು ಅಸ್ಸಾಂ ಭವನ ಮತ್ತು ಒಡಿಶಾ ಭವನದ ಬಳಿಯ ಪ್ರದೇಶಗಳಿಂದ ಹಿಡಿದು ಪೊಲೀಸ್ ಬಸ್‌ಗಳಲ್ಲಿ ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
#WATCH | Delhi Police detains AISA workers marching towards Karnataka Bhawan in the national capital to protest against Karnataka Govt's rule on dress code in schools#HijabRow pic.twitter.com/Qe1QhpvXNi
— ANI (@ANI) February 10, 2022