ಲೋಕಸಭಾ ಚುನಾವಣೆ: ಆದಿತ್ಯ ಠಾಕ್ರೆ ನಾಯಕತ್ವದಲ್ಲಿ ದೇಶಾದ್ಯಂತ ಶಿವಸೇನೆ ಸ್ಪರ್ಧೆ; ಸಂಜಯ್ ರಾವುತ್

Update: 2022-02-13 17:05 GMT

ಮುಂಬೈ,ಫೆ.13: ಶಿವಸೇನೆಯು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಯವರ ನಾಯಕತ್ವದಲ್ಲಿ ಲೋಕಸಭಾ ಚುನಾವಣೆಗಳಲ್ಲಿ ದೇಶಾದ್ಯಂತ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ ಸಂಜಯ ರಾವುತ್ ಅವರು ರವಿವಾರ ಇಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಈಗಷ್ಟೇ ನಾವು ಗೋವಾದಿಂದ ಮರಳಿದ್ದೇವೆ ಮತ್ತು ಶೀಘ್ರವೇ ಆದಿತ್ಯ ಠಾಕ್ರೆ ಜೊತೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದೇವೆ. ಅಲ್ಲಿ ಅಖಿಲೇಶ್ ಯಾದವ ಸರಕಾರವನ್ನು ರಚಿಸಲಿದ್ದಾರೆ. ಆದಿತ್ಯ ನಾಯಕತ್ವದಲ್ಲಿ ನಾವು ಲೋಕಸಭಾ ಚುನಾವಣೆಗಳಲ್ಲಿ ದೇಶಾದ್ಯಂತ ಸ್ಪರ್ಧಿಸಲಿದ್ದೇವೆ ಮತ್ತು ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ’ಎಂದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ವಿವಾದಾತ್ಮಕ ಹೇಳಿಕೆ ಮತ್ತು ಅವರನ್ನು ‘ಆಧುನಿಕ ಯುಗದ ಜಿನ್ನಾ ’ಎಂದು ಕರೆದಿರುವ ಕುರಿತಂತೆ ರಾವುತ್,ಶರ್ಮಾ ತನ್ನ ಇಡೀ ಜೀವನವನ್ನು ಕಾಂಗ್ರೆಸ್‌ನಲ್ಲಿ ಕಳೆದಿದ್ದಾರೆ. ಆಗ ಅವರಿಗೆ ರಾಹುಲ್ ಜೊತೆಗಿನ ಈ ಸಂದರ್ಶನ ಸಿಕ್ಕಿರಲಿಲ್ಲ. ಅವರು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಜೊತೆ ಕೆಲಸ ಮಾಡಿದ್ದಾರೆ. ತಮ್ಮ ಮಾಜಿ ನಾಯಕರ ವಿರುದ್ಧ ಇಂತಹ ಹೇಳಿಕೆಗಳನ್ನು ಯಾರೂ ನೀಡಬಾರದು,ಏಕೆಂದರೆ ನಿಮ್ಮನ್ನು ನಾಯಕನಾಗಿಸುವಲ್ಲಿ ಅವರ ಕೊಡುಗೆಯೂ ಇದೆ ಎಂದರು.

ತನ್ನ ಸರಕಾರದ ವಿರುದ್ಧ ಆರೋಪಗಳನ್ನು ಮಾಡುವವರನ್ನು ವೈದ್ಯಕೀಯ ಚಿಕಿತ್ಸೆಗೊಳಪಡಿಸಬೇಕು ಎಂಬ ಹೇಳಿಕೆಗಾಗಿ ಮುಖ್ಯಮಂತ್ರಿಉದ್ಧವ ಠಾಕ್ರೆಯವರನ್ನು ಸಮರ್ಥಿಸಿಕೊಂಡ ರಾವುತ್,ಕೋವಿಡ್ ಕುರಿತು ಮುಖ್ಯಮಂತ್ರಿಗಳು ಹೇಳಿದ್ದು ಸರಿಯಾಗಿಯೇ ಇದೆ,ಏಕೆಂದರೆ ಶವಗಳು ಮಹಾರಾಷ್ಟ್ರದ ನದಿಗಳಲ್ಲಿ ತೇಲುತ್ತಿರಲಿಲ್ಲ, ನೀವು ಬೆಟ್ಟು ಮಾಡಬೇಕೆಂದಿದ್ದರೆ ಉತ್ತರ ಪ್ರದೇಶ ಮತ್ತು ಗುಜರಾತಿಗೆ ಹೋಗಿ ನೋಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News