ಶ್ರೀಲಂಕಾ ವಿರುದ್ಧ ಮೊದಲ ಟ್ವೆಂಟಿ-20: ಭಾರತ ಜಯಭೇರಿ

Update: 2022-02-24 17:21 GMT
Photo: BCCI

   ಲಕ್ನೊ, ಫೆ.24: ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ನೀಡಿದ ಅರ್ಧಶತಕದ ಕೊಡುಗೆ, ಬೌಲರ್ ಗಳ ಶಿಸ್ತುಬದ್ದ ಬೌಲಿಂಗ್ ನೆರವಿನಿಂದ ಭಾರತ ತಂಡ ಗುರುವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ 62 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಲಂಕೆಯ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಚರಿತ್ ಅಸಲಂಕ(ಔಟಾಗದೆ 53, 47 ಎಸೆತ, 5 ಬೌಂ.)ಏಕಾಂಗಿ ಹೋರಾಟ ನೀಡಿದರು. ದುಷ್ಮಂತ ಚಮೀರ ಔಟಾಗದೆ 24 ರನ್ ಗಳಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ ಕುಮಾರ್(2-9) ಹಾಗೂ ವೆಂಕಟೇಶ್ ಅಯ್ಯರ್(2-36)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News